top of page

Avadhoota Geete ಅವಧೂತ ಗೀತೆ ಸಾರ

  • Writer: madhwamaanasa3
    madhwamaanasa3
  • Aug 20, 2023
  • 2 min read

Updated: Jan 11

ಪೃಥ್ವೀ ವಾಯುರಾಕಾಶಃ ಆಪೋಗ್ನೀಃ ಚಂದ್ರಮಾ ರವಿಃ ।

ಕಪೋತೋಜಗರಸಿಂಧುಃ ಪತಂಗೋ ಮಧುಕೃದ್ಗಜಃ ॥

ಮಧುಹಾ ಹರಿಣೋ ಮೀನಃ ಪಿಂಗಳಾ ಕುರರೋರ್ಭಕಃ।

ಕುಮಾರಿ ಶರಕೃತ್ ಸರ್ಪಃ ಊರ್ಣನಾಭಿಃ ಸುಪೇಶಕೃತ್ ॥

ಏತೇ ಮೇ ಗುರುವೋ ರಾಜಂಶ್ಚತುರ್ವಿಂಶತಿರಾಶ್ರಿತಾಃ ॥

(ಭಾಗವತ 11ನೇ ಸ್ಕಂದ, 7ನೇಯ ಅಧ್ಯಾಯ, 33,34,35 ಶ್ಲೋಕಗಳು)



Pruthvi vaayuraakaashaah aapoagnih chandramaa ravih ।

Kapotoajagarasindhuh patango madhukrudgajah ॥

Madhuha harino meenah pingalaa kurarorbhakah ।

Kumari sharakrut sarpah urnanaabhih supeshakrut ॥

Ete mey guruvo rajamschaturvinshatiraashritaah ॥

( Bhagavata 11th Skanda, 7th chapter, sloka 33,34,35)


(ಇದು ಯದುರಾಜ ಮತ್ತು ಅವಧೂತರ ನಡುವೆ ನಡೆದ ಸಂವಾದದಲ್ಲಿ ಹೊರ ಬಂದ ಯಥಾರ್ಥ ಜ್ಞಾನಕುಸುಮ. ಕಾಡಲ್ಲಿದ್ದು, ಯಾವುದೇ ತರಹದ ಸುಖ ಸಂಪತ್ತುಗಳಿಲ್ಲದೆ ಜೀವಿಸುತ್ತಿರುವ ಅವಧೂತರನ್ನು ಕಂಡು ಬೆರಗಾದ ಯದುರಾಜ, ನಿಮ್ಮಲ್ಲಿ ಕಾಣುತ್ತಿರುವ ಈ ಉಲ್ಲಾಸ ಹಾಗೂ ಆನಂದಗಳ ಗುಟ್ಟೇನು ಎಂದು ಬೆರಗಾಗಿ ಕೇಳಿದಾಗ ಅವಧೂತರು ಕೊಟ್ಟ ಉತ್ತರವಾಗಿದೆ).


ಅವಧೂತರು: ನನಗೆ ಪ್ರಕೃತಿಯೇ ಮೂಲ ಗುರು. ನಾನಿನ್ನಾರಲ್ಲೂ ಕಲಿತದ್ದಿಲ್ಲ. ಒಬ್ಬ ಮನುಷ್ಯನಿಗೆ ಜೀವಮಾನದಲ್ಲಿ ಬೇಕಾಗುವ ಎಲ್ಲ ತರಹದ ವಿದ್ಯೆಗಳನ್ನು ತನ್ನ ಸುತ್ತಮುತ್ತಲ ಪರಿಸರದಿಂದಲೇ ಕಲಿಯಬಹುದು. ಅದರಿಂದಲೇ ಬೆಳೆಯಬಹುದು. ಇಲ್ಲಿ ಈ 24 ಮುಖ್ಯ ಗುರುಗಳೇ ನನಗೇ ಸ್ಪೂರ್ತಿ. ಅವರ ಸ್ವಭಾವವೇ ವೇದವಾಕ್ಯವಾಗಿ ಪರಿಣಮಿಸಿವೆ.


1] ಪೃಥವೀ : ಸರ್ವ ಸಹಿಷ್ಣುತೆ

2] ವಾಯು : ಅಸಂಗ

3] ಆಕಾಶ : ಅವಕಾಶ, ನಿರ್ಲಿಪ್ತತೆ

4] ನೀರು : ಸ್ವಚ್ಛತೆ

5] ಅಗ್ನಿ : ಪವಿತ್ರತೆ

6] ಚಂದ್ರ : ನಿರ್ವಿಕಾರತೆ

7] ಸೂರ್ಯ : ನಿಃಸ್ವಾರ್ಥತೆ

8] ಪಾರಿವಾಳ : ಅಭಿಮಾನ ತ್ಯಾಗ

9] ಅಜಗರ(ಹೆಬ್ಬಾವು) : ಯದೃಚ್ಛಾಲಾಭ

10] ಸಮುದ್ರ : ಸಮಾನತೆ

11] ಪತಂಗ : ಹೆಣ್ಣಿಗೆ ವಶನಾಗದಿರುವಿಕೆ

12] ಜೇನುಹುಳು : ಸಂಗ್ರಹ

13] ಆನೆ : ಕಾಮತ್ಯಾಗ

14] ಜೇನು ಹಿಡಿಯುವವ(ಬೇಡ) : ಅಸಂಗ್ರಹ

15] ಜಿಂಕೆ : ಗ್ರಾಮ್ಯ ಗೀತಾ ತ್ಯಾಗ

16] ಮೀನು : ಜಿಹ್ವಾ ಚಾಪಲ್ಯ ತ್ಯಾಗ

17] ಪಿಂಗಳಾ( ವೇಶ್ಯೆ) : ವೈರಾಗ್ಯ

18] ಕುರರ ಪಕ್ಷಿ : ಅಪರಿಗ್ರಹ

19] ಬಾಲಕ : ಲೋಕ ಬಾಹ್ಯತೆ

20] ಕನ್ಯಾ : ಏಕಾಂತತೆ

21] ಬಡಗಿಯವ : ಏಕಾಗ್ರತೆ

22] ಸರ್ಪ : ಅನಿಕೇತತೆ

23] ಜೇಡರಹುಳು : ದೇವರ ಮಹಿಮೆ

24] ಕಣಜದ ಹುಳು : ತನ್ಮಯತೆ


ಅವಧೂತರು ಲೋಕವನ್ನು ತಿರಸ್ಕರಿಸಿ ಹೋದವರು. ನಾವು ಲೋಕವನ್ನು ಅಪ್ಪಿಕೊಂಡಿರುವವರು. ಆದ್ದರಿಂದ ಇದರಲ್ಲಿ ಹೆಚ್ಚಿನವು ಲೋಕವನ್ನು ಅಪ್ಪಿಕೊಂಡು ಜೀವಿಸುತ್ತಿರುವ ನಮಗೆ ಅನ್ವಯಿಸದಿರಬಹುದು ಅಥವಾ ಕಾರ್ಯಸಾಧುವಲ್ಲ. ಆದರೆ ಅದರಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನಾದರೂ ನಮ್ಮ ಜೀವನಗಳಲ್ಲಿ ಅಳವಡಿಸಿಕೊಂಡರೆ ಸ್ವಲ್ಪವಾದರೂ ದುಃಖದ ತೀಕ್ಷ್ಣತೆ ಕಡಿಮೆಯಾಗುತ್ತದೆ ಮತ್ತು ಸಮಾಧಾನದ ಜೀವನವನ್ನು ಅನುಭವಿಸಬಹುದು.



Recent Posts

See All
18 ರ ಪ್ರಪಂಚ

ಜೀವಿಯು 15 ಬೇಲಿಗಳಿಂದ ಆವೃತ್ತನಾಗಿದ್ದಾನೆ. ನಾಮ ಲೋಕ (ಆಸ್ತಿ-ಪಾಸ್ತಿ) ತಪ (ಚಿಂತನೆ) ಮಂತ್ರ (ಮಾತು, ವ್ಯಕ್ತಪಡಿಸುವಿಕೆ) ಕರ್ಮ (ಕಾರ್ಯಪ್ರವೃತ್ತತೆ) ವೀರ್ಯ (ಬಲ,...

 
 
 
Papapurusha Visarjana ಪಾಪಪುರುಷ ವಿಸರ್ಜನ

ಪಾಪಪುರುಷ ಧ್ಯಾನಂ ನಿರಸನಂಚ | ತತೋ ಹೃತಸ್ಥಂ ಭಗವಂತಂ ಸುಷುಮ್ನಾ ಮಾರ್ಗತಃ ಮೂರ್ಧ್ನಿ ವಿನ್ಯಸ್ಯೇತ್‌ | ವಾಮಕುಕ್ಷಂ ಸ್ಪೃಷ್ಟ್ವಾ ಪಾಪ ಪುರುಷಂ ಧ್ಯಾಯೇತ್‌ ||...

 
 
 
Matrukaanyasa ಮಾತೃಕಾನ್ಯಾಸ:

“ಓಂ ನಮೋ ನಾರಾಯಣಾಯ” ಮಂತ್ರದಿಂದ ೧೨ ಸಲ ಪ್ರಾಣಾಯಾಮ ಓಂ ಭೂಃ | ಅಗ್ನ್ಯಾತ್ಮನೇ ಶ್ರೀ ಅನಿರುದ್ಧಾಯ ನಮಃ | ಓಂ ಭುವಃ | ವಾಯ್ವಾತ್ಮನೇ ಶ್ರೀ ಪ್ರದ್ಯುಮ್ನಾಯ ಶಿರಸೇ...

 
 
 

Comments


9916678573

©2022 by Madhwamaanasa. 

bottom of page