Aarige Vadhuvaade ಆರಿಗೆ ವಧುವಾದೆ ಅಂಬುಜಾಕ್ಷಿ
- madhwamaanasa3
- Aug 20, 2023
- 1 min read
Updated: Jan 11
ಆರಿಗೆ ವಧುವಾದೆ ಅಂಬುಜಾಕ್ಷಿ ।
ಕ್ಷೀರಾಬ್ಧಿ ಕನ್ನಿಕೆ ಶ್ರೀಮಹಾಲಕುಮಿ ॥
ಶರಧಿ ಬಂಧನ ರಾಮಚಂದ್ರ ಮೂರುತಿಗೋ
ಪರಮಾತ್ಮ ಅನಂತ ಪದ್ಮನಾಭನಿಗೋ ।
ಸರಸಿಜನಾಭ ಜನಾರ್ಧನ ಮೂರುತಿಗೋ
ಎರಡು ಹೊಳೆಯ ರಂಗ ಪಟ್ಟಣ ವಾಸಗೋ ॥
ಚಲುವ ಬೇಲೂರು ಚೆನ್ನಿಗರಯನಿಗೋ
ಕೆಳದಿ ಹೇಳು ಉಡುಪಿಯ ಕೃಷ್ಣರಾಯಗೋ ।
ಇಳೆಯೊಳು ಪಂಢರಪುರ ವಿಠಲೇಶಗೋ
ನಳಿನಾಕ್ಷಿ ಪೇಳು ಬದರೀನಾರಯಣಗೋ ॥
ಶರಣಾಗತರ ಪೊರೆವ ಶಾರಂಗ ಪಾಣಿಗೊ
ವರಗಳ ನೀವ ಶ್ರೀ ಶ್ರೀನಿವಾಸನಿಗೊ ।
ಕುರುಕುಲಾಂತಕ ನಮ್ಮ ರಾಜಗೋಪಾಲಗೋ
ಸ್ಥಿರವಾಗಿ ಪೇಳು ಪುರಂದರವಿಠಲಗೋ ॥
Comments