Uma Katyayini ಉಮಾ ಕಾತ್ಯಾಯಿನೀ ಗೌರೀ
- madhwamaanasa3
- Dec 22, 2024
- 1 min read
Updated: Jan 11
ಉಮಾ ಕಾತ್ಯಾಯಿನೀ ಗೌರೀ ದಾಕ್ಷಾಯಿಣೀ ಹಿಮವಂತ ಗಿರಿಯ ಕುಮಾರಿ
ರಮೆಯರಸನ ಪದಕಮಲಮಧುಪೆ ನಿತ್ಯ ಅಮರವಂದಿಪೆ ಗಜಗಮನೆ ಭವಾನೀ
ಪನ್ನಗವೇಣೀ ಶರ್ವಾಣೀ ಕೋಕಿಲವಾಣಿ ಉನ್ನತಗುಣಗಣ ಸುಶ್ರೇಣಿ
ಪನ್ನಗಧರನ ರಾಣಿ ಪರಮಪಾವನೀ ಪುಣ್ಯಫಲಪ್ರದಾಯಿನೀ
ಎನ್ನ ಮನದ ಅಭಿಮಾನಿ ದೇವತೆಯೇ
ಸ್ವರ್ಣಗಿರಿ ಸಂಪನ್ನೆ ಭಾಗ್ಯನಿಧಿ
ನಿನ್ನ ಮಹಿಮೆಯನು ಬಿನ್ನಾಣದಲ್ಲಿ ಬಣ್ಣಿಸಲಸದಳವೇ ಪ್ರಸನ್ನವದನಳೇ
ಮುತ್ತಿನಪದಕ ಹಾರ ಮೋಹನ್ನಸರ ಉತ್ತಮಾಂಗದಲಂಕಾರ
ಜೊತ್ಯಾಗಿಟ್ಟ ಪಂಜರದೋಲೆ ಒಯ್ಯಾರ ರತ್ನಕಂಕಣದುಂಗುರ
ತೆತ್ತೀಸಕೋಟಿ ದೇವತೆಗಳು ಪೊಗಳುತ ಸತ್ತಿಗೆ ಚಾಮರವೆತ್ತಿ ಪಿಡಿಯುತಿರೇ
ಸುತ್ತಲೂ ಆಡುವ ನರ್ತನಸಂದರ ಎತ್ತ ನೋಡಿದರತ್ತ ತತ್ಥೈವಾದ್ಯ
ಪೊಳೆವ ವಸನ ಕಂಚುಕ ಕಸ್ತೂರಿ ತಿಲಕ ಥಳಿಪ ಮೂಗುತಿ ನಾಸಿಕ
ತಳಿಪ ಮಲ್ಲಿಗೆ ಗಂಧಿಕ ಮುಡಿದ ಸೂಸುಕ ಸಲೇ ಭುಜಕೀರ್ತಿನಾಸಿಕ
ಇಳೆಯೊಳು ಮಧುರಪುರದೊಳುವಾಸ ಅಳಗಿರಿ ವಿಜಯವಿಠ್ಠಲನ ಕೊಂಡಾಡುವ
ಸುಲಭ ಜನರಿಗೆ ನೀ ಒಲಿದು ಮತಿಯನು ಈವೆ ಹೇ ಪರಮಮಂಗಳೇ ದಾಕ್ಷಾಯಿಣೀ ಹಿಮವಂತ ಗಿರಿಯ ಕುಮಾರಿ
ರಮೆಯರಸನ ಪದಕಮಲಮಧುಪೆ ನಿತ್ಯ ಅಮರವಂದಿಪೆ ಗಜಗಮನೆ ಭವಾನೀ
ಪನ್ನಗವೇಣೀ ಶರ್ವಾಣೀ ಕೋಕಿಲವಾಣಿ ಉನ್ನತಗುಣಗಣ ಸುಶ್ರೇಣಿ
ಪನ್ನಗಧರನ ರಾಣಿ ಪರಮಪಾವನೀ ಪುಣ್ಯಫಲಪ್ರದಾಯಿನೀ
ಎನ್ನ ಮನದ ಅಭಿಮಾನಿ ದೇವತೆಯೇ
ಸ್ವರ್ಣಗಿರಿ ಸಂಪನ್ನೆ ಭಾಗ್ಯನಿಧಿ
ನಿನ್ನ ಮಹಿಮೆಯನು ಬಿನ್ನಾಣದಲ್ಲಿ ಬಣ್ಣಿಸಲಸದಳವೇ ಪ್ರಸನ್ನವದನಳೇ
ಮುತ್ತಿನಪದಕ ಹಾರ ಮೋಹನ್ನಸರ ಉತ್ತಮಾಂಗದಲಂಕಾರ
ಜೊತ್ಯಾಗಿಟ್ಟ ಪಂಜರದೋಲೆ ಒಯ್ಯಾರ ರತ್ನಕಂಕಣದುಂಗುರ
ತೆತ್ತೀಸಕೋಟಿ ದೇವತೆಗಳು ಪೊಗಳುತ ಸತ್ತಿಗೆ ಚಾಮರವೆತ್ತಿ ಪಿಡಿಯುತಿರೇ
ಸುತ್ತಲೂ ಆಡುವ ನರ್ತನಸಂದರ ಎತ್ತ ನೋಡಿದರತ್ತ ತತ್ಥೈವಾದ್ಯ
ಪೊಳೆವ ವಸನ ಕಂಚುಕ ಕಸ್ತೂರಿ ತಿಲಕ ಥಳಿಪ ಮೂಗುತಿ ನಾಸಿಕ
ತಳಿಪ ಮಲ್ಲಿಗೆ ಗಂಧಿಕ ಮುಡಿದ ಸೂಸುಕ ಸಲೇ ಭುಜಕೀರ್ತಿನಾಸಿಕ
ಇಳೆಯೊಳು ಮಧುರಪುರದೊಳುವಾಸ ಅಳಗಿರಿ ವಿಜಯವಿಠ್ಠಲನ ಕೊಂಡಾಡುವ
ಸುಲಭ ಜನರಿಗೆ ನೀ ಒಲಿದು ಮತಿಯನು ಈವೆ ಹೇ ಪರಮಮಂಗಳೇ
Comments