Ollano Hari Kollano ಒಲ್ಲನೋ ಹರಿ ಕೊಳ್ಳನೋ
- madhwamaanasa3
- Aug 20, 2023
- 1 min read
Updated: Jan 11
ಒಲ್ಲನೋ ಹರಿ ಕೊಳ್ಳನೋ |
ಎಲ್ಲ ಸಾಧನವಿದ್ದು ತುಳಸಿಯಿಲ್ಲದ ಪೂಜೆ ||
ಸಿಂಧು ಶತಕೋಟಿ ಗಂಗೋದಕವಿದ್ದು
ಗಂಧ ಸುಪರಿಮಳ ವಸ್ತ್ರವಿದ್ದು |
ಚೆಂದುಳ್ಳ ಆಭರಣ ಧೂಪದೀಪಗಳಿದ್ದು
ಬೃಂದಾವನ ಶ್ರೀ ತುಳಸಿ ಇಲ್ಲದ ಪೂಜೆ ||
ದಧಿಕ್ಷೀರ ಮೊದಲಾದ ಅಭಿಷೇಕಗಳಿದ್ದು
ಮಧುಪರ್ಕ ಪಂಚೋಪಚಾರವಿದ್ದು |
ಮುದದಿಂದ ಮುದ್ದು ಶ್ರೀ ಕೃಷ್ಣ ಪೂಜೆಗೆ
ಸದಮಲಳಾದ ಶ್ರೀ ತುಳಸಿ ಇಲ್ಲದ ಪೂಜೆ ||
ಮಂತ್ರ ಮಹಾಮಂತ್ರ ಪುರುಷಸೂಕ್ತಗಳಿದ್ದು
ತಂತು ತಪ್ಪದೆ ತಂತ್ರಸಾರವಿದ್ದು |
ಸಂತತ ಸುಖಸಂಪೂರ್ಣನ ಪೂಜೆಗೆ
ಅತ್ಯಂತಪ್ರಿಯಳಾದ ತುಳಸಿ ಇಲ್ಲದ ಪೂಜೆ ||
ಕಮಲಮಲ್ಲಿಗೆ ಜಾಜಿ ಸಂಪಿಗೆ ಕೇದಿಗೆ
ವಿಮಲಘಂಟೆ ಪಂಚವಾದ್ಯವಿದ್ದು |
ಅಮಲಪಂಚಭಕ್ಷಪರಮಾನ್ನಗಳಿದ್ದು
ಕಮಲನಾಭನು ತನ್ನ ತುಳಸಿ ಇಲ್ಲದ ಪೂಜೆ ||
ಪೂಜೆಯ ಮಾಡದೆ ತುಳಸಿ ಮಂಜರಿಯಿಂದ
ಮೂಜಗದೊಡೆಯ ಮುರಾರಿಯನು |
ರಾಜಾಧಿರಾಜನೆಂಬ ಮಂತ್ರಪುಷ್ಪಗಳಿಂದ
ಪೂಜಿಸಿದರು ಒಲ್ಲ ಪುರಂದರವಿಠ್ಠಲ ||
Comments