Karedarilli Baarane ಕರೆದರಿಲ್ಲಿ ಬಾರನೆ ಕಾಂತೆ ಮುಖವ ತೋರನೆ
- madhwamaanasa3
- Nov 12, 2023
- 1 min read
Updated: Jan 11
ಕರೆದರಿಲ್ಲಿ ಬಾರನೆ ಕಾಂತೆ ಮುಖವ ತೋರನೆ
ಮಧುರಪುರದ ಅರಸನೇ ಕೂಡಿ ಎನ್ನ ರಹಿತನೇ
ಶ್ರೀರಂಗ ಬಾರನೆ ರಂಗ ಬಾರನೆ
ಮುನಿಸು ಮನದಲ್ಲಿಟ್ಟರೆ ಮೋಹವನ್ನು ಬಿಟ್ಟರೆ
ಮನದಿ ಛಲವ ತೊಟ್ಟರೆ ಮನೆಗೆ ಬಾರದೆ ಬಿಟ್ಟರೆ
ಶ್ರೀರಂಗ ಬಾರನೆ ರಂಗ ಬಾರನೆ
ಎಂತು ನಂಬಿ ಇದ್ದರೆ ಎಂತು ಗುರುತು ಮರೆತರೆ
ಪಂಥ ವ್ಯಾಸಗೆ ಕಲಿತರೆ ಕಾಂತೆಯರ ಕೂಡಿ ಮೆರೆದರೆ
ಶ್ರೀರಂಗ ಬಾರನೆ ರಂಗ ಬಾರನೆ
ಸೋಳ ಸಾಸಿರ ಗೋಪಿ ಸಹಿತ ಜಲದಲಾಡಿ ಪೋದನೆ
ಸೆಳೆದು ಒಬ್ಬಳ ಒಯ್ದನೆ ಚಲುವ ಹಯವದನನೆ
ಶ್ರೀರಂಗ ಬಾರನೆ ರಂಗ ಬಾರನೆ
Comments