Popu Hogona Baaro ಪೋಪು ಹೋಗೋಣ ಬಾರೋ ಕೃಷ್ಣ
- madhwamaanasa3
- Jun 2, 2023
- 1 min read
Updated: Jan 11
ಪೋಪು ಹೋಗೋಣ ಬಾರೋ ಕೃಷ್ಣ
ಕೂಡಿ ಯಮುನೆ ತೀರದಲ್ಲಿ
ಜಾಹ್ನವಿಯ ತೀರವಂತೆ
ಜನಕರಾಯನ ಕುವರಿಯಂತೆ
ಜಾನಕಿಯ ವಿವಾಹವಂತೆ
ಜಾಣ ನೀನು ಬರಬೇಕಂತೆ
ಕುಂಡಲೀಯ ನಗರವಂತೆ
ಭೀಷ್ಮಕನ ಕುವರಿಯಂತೆ
ಶಿಶುಪಾಲನ ಒಲ್ಲಳಂತೆ
ನಿನಗೆ ಓಲೆ ಬರೆದಳಂತೆ
ಪಾಂಡವರು ಕೌರವರಿಗೆ
ಲೆತ್ತವಾಡಿ ಸೋತರಂತೆ
ರಾಜ್ಯವನ್ನು ಬಿಡಬೇಕಂತೆ
ರಂಗವಿಠ್ಠಲ ಬರಬೇಕಂತೆ
Comments