Pullanabhana Smarane ಪುಲ್ಲನಾಭನ ಸ್ಮರಣೆ ಇಲ್ಲದೆ ಇರಲೊಲ್ಲೆ
- madhwamaanasa3
- Aug 20, 2023
- 1 min read
Updated: Jan 11
ಪುಲ್ಲನಾಭನ ಸ್ಮರಣೆ ಇಲ್ಲದೆ ಇರಲೊಲ್ಲೆ
ಒಲ್ಲೆ ದುರಿತಗಳ ನಾನೊಲ್ಲೆ
ದುರ್ಜನ ಸಂಗವ ಎಂದೆಂದಿಗೂ ಒಲ್ಲೆ
ಸಜ್ಜನ ವಿರಸಗಲ ಒಲ್ಲೆ ಒಲ್ಲೆನೋ ಸ್ವಾಮಿ
ಅರ್ಜುನ ಸಖ ನಿನ್ನ ಸೇವೆಯ ಬಿಡಲೊಲ್ಲೆ
ಅಬ್ಜಬಾಣನ ಮೇಳ ಒಲ್ಲೆ ಒಲ್ಲೆನೋ ಸ್ವಾಮಿ
ಬಲ್ಲಿದ ಹರಿಪಾದ ಸೇವೆಯ ಬಿಡಲೊಲ್ಲೆ
ಸಲ್ಲದ ಸುಖಗಳ ಒಲ್ಲೆ ಒಲ್ಲೆನೋ ಸ್ವಾಮಿ
ಅಲ್ಲದ ಕರ್ಮಗಳ ಆಚರಿಸಲೊಲ್ಲೆ
ಖುಲ್ಲ ದೈವದ ಪೂಜೆ ಎಂದೆಂದಿಗೂ ಒಲ್ಲೆ
ಹರಿನಾಮ ಸ್ಮರಣೆಯ ಮನದಿ ಬಿಟ್ಟಿರಲೊಲ್ಲೆ
ದುರ್ವಿಷಯದಿ ಹರುಷ ಒಲ್ಲೆ ಒಲ್ಲೆನೋ ಸ್ವಾಮಿ
ಕರುಣಿ ಹಯವದನನ ಕಾಣದೆ ಇರಲೊಲ್ಲೆ
ಹರಿಯೇ ನೀನಲ್ಲದೆ ಅನ್ಯ ದೈವವನೊಲ್ಲೆ
Comments