ಬಣ್ಣಕ್ಕಿಂತ ಬದುಕು ಮುಖ್ಯ
- madhwamaanasa3
- Aug 20, 2023
- 1 min read
ಬಣ್ಣಕ್ಕಿಂತ ಬದುಕು ಮಹತ್ವ. ಬದುಕಿಗೆ ಬಣ್ಣವಿದೆ ವಿನಾ ಬಣ್ಣಕ್ಕೆ ಬದುಕಿಲ್ಲ. ಕೋಗಿಲೆ ಹಾಡಲು, ನವಿಲು ಕುಣಿಯಲು, ಗಿಳಿ ಸವಿನುಡಿಯುವುದು, ಮೊಲ ಒಡುವುದು, ಮಾನವ ಯೋಚಿಸುವುದು,ಪಾರಿವಾಳ ಮನಮೋಹಿಸುವುದು ಇವೆಲ್ಲಾ ಬದುಕಿನ ವಿವಿಧ ಬಣ್ಣಗಳು. ಇವಕ್ಕೂ ಮಹತ್ವವಿದೆ. ಆದರೆ ಸ್ವತಂತ್ರ ಅಸ್ತಿತ್ವವಿಲ್ಲ. ಆಯಾ ಗುಣಗಳಿಗೆ ಆಯಾ ಬದುಕು ದೊರೆತಾಗ ಸಾಧ್ಯ. ಆದ್ದರಿಂದ ವೈಶಿಷ್ಟ್ಯಗಳಿಗಿಂತ ಬದುಕು ಮುಖ್ಯ. ಜೀವನವಿದ್ದರೆ ಎಲ್ಲವನ್ನು ಪಡೆಯಬಹುದು. ಅದೇ ರೀತಿಯಾಗಿ ಸಂಸಾರದಲ್ಲಿರುವ ಎಲ್ಲ ಜೀವಿಗಳು ಒಂದೊಂದು ಬಣ್ಣದಂತೆ. ಎಲ್ಲರಿಗೂ ಅವರವರ ಯೋಗ್ಯತೆಯ ಕಾರ್ಯಗಳಿವೆ ಅಂದರೆ ಬಣ್ಣಗಳಿವೆ(ಹಾಡುವುದು,ನೃತ್ಯ,ವಾಚನ ಇತ್ಯಾದಿ). ಆದರೆ ಇವೆಲ್ಲಾ ಅನುಭವಿಸಲು ಜೀವನ(ಬದುಕು) ಅತ್ಯವಶ್ಯಕ. ಅದಿಲ್ಲದಿದ್ದರೆ ಎನನ್ನೂ ಮಾಡಲಾಗುವುದಿಲ್ಲ. ಬದುಕೇ ಆದಿ ಅಂತ್ಯ ಹಾಗೂ ಸ್ಥಿತಿ. ಈ ಬದುಕೇ ಭಗವಂತ. ಅವನೇ ಆದಿ ಅಂತ್ಯ ಸ್ಥಿತಿ. ಅವನಿಂದಲೇ ಜೀವರು, ಜೀವರ ಕಾರ್ಯಗಳು ಹಾಗೂ ಬಣ್ಣಗಳು.
Comentarios