Bideno Bideno ninna ಬಿಡೆನೋ ಬಿಡೆನೋ ನಿನ್ನ ಚರಣ
- madhwamaanasa3
- Dec 22, 2024
- 1 min read
Updated: Jan 11
ಬಿಡೆನೋ ಬಿಡೆನೋ ನಿನ್ನ ಚರಣ ಕಮಲವ
ಎನ್ನ ಹೃದಯ ಮಧ್ಯದೊಳಿಟ್ಟು ಭಜಿಸುವೆ ಅನುದಿನ
ಬಲಿಯ ದಾನವ ಬೇಡಿ ಅಳದೆ ಬ್ರಹ್ಮಾಂಡ
ನಳಿನೋದ್ಭವ ಬಂದು ಪಾದವ ತೊಳೆಯೆ
ಉಗುರಿನ ಕೊನೆಯಿಂದ ಉದಿಸಿದಳಾ ಗಂಗೆ
ಹರಿಪಾದ ತೀರ್ಥವೆಂದು ಹರ ಧರಿಸಿದನಾಗ
ಆಪತಿ ಶಾಪದಿ ಅಹಲ್ಯೆ ಸಾಸಿರಯುಗ
ಪಾಶಾಣವಾಗಿ ಪಥದೊಳು ಇರಲು
ಶ್ರೀಪತಿ ನಿನ್ನಯ ಶ್ರೀಪಾದ ಸೋಕಲು
ಪಾಪರಹಿತಳಾಗಿ ಪದಿ ಕಂಡಳಾಗ
ವಜ್ರಾಂಕುಶ ಧ್ವಜ ಪದುಮ ರೇಖೆಗಳಿಂದ
ಪ್ರಜ್ವಲಿಸುವ ನಿನ್ನ ಪಾದ ಪದ್ಮವನ್ನು
ಘರ್ಜಿಸಿ ಭಜಿಸುವೆ ಸಿರಿಹಯವದನನೆ
ಭವ ಜರ್ಝರ ಬಿಡಿಸುವನೆಂದು ನಂಬಿಹೆನಾಗಿ
Comments