Mukhya Karana Vishnu ಮುಖ್ಯ ಕಾರಣ ವಿಷ್ಣು
- madhwamaanasa3
- Jan 13, 2024
- 1 min read
Updated: Jan 11
ಮುಖ್ಯ ಕಾರಣ ವಿಷ್ಣು ಸ್ವತಂತ್ರನೇ ಸತ್ಯ |
ಸತ್ಯರ ಪೋಷಕ ಸಿರಿ ಅಜಭವಾದ್ಯಮರೇಶ ||
ಮುಖ್ಯ ಕಾರಣ ವಿಷ್ಣು ಸ್ವತಂತ್ರನೇ ಸತ್ಯ
ತಿಳಿವೆಂಬುವವ ನೀನೇ ತಿಳಿದು ತಿಳಿಸುವ ನೀನೇ
ತಿಳಿವ ವಸ್ತುವು ನೀನೇ ತೀರ್ಥಪದ ನೀನೇ |
ತಿಳಿದುದಕೆ ಫಲ ನೀನೇ ತಿಳಿಯಗೊಡದವ ನೀನೇ
ತಿಳಿವ ಸ್ವತಂತ್ರ ನಿನ್ನದು ತಿಳಿಸೋ ಸರ್ವೇಶ ||
ಧ್ವನಿ ವರ್ಣೋದಯ ಶಬ್ದ ವಾಚ್ಯನು ನೀನೇ
ಗುಣ ದೇಶ ಕಾಲ ಕರ್ಮಗಳು ನೀನೇ |
ತನುಕರಣ ವಿಷಯ ಮನ ಜೀವ ಸ್ವಾಮಿಯು ನೀನೇ
ಅಣು ಮಹಜ್ಜಗದ ಬಹಿರಂತರ್ವ್ಯಾಪಕನೇ ||
ವ್ಯಾಸ ಕಪಿಲ ಹಯಾಧ್ಯ ಧನ್ವಂತ್ರೀ ವೃಷಭ
ಮಹಿದಾಸ ದತ್ತಾತ್ರೇಯಾದಿ ಅಮಿತ ರೂಪ |
ಈಸು ರೂಪದಿ ಅಧಿಕಾರಿಗಳಿಗೊಲಿದು
ಪೋಷಕನು ಆದೇ ಕೃಪಾಳುವೇ ಶ್ರೀಶ ||
ಚೇತನನು ನಾನು ನೀ ಚೇಷ್ಟೆಯನು ಮಾಡಿಸಲು
ಅಚೇತನನು ಸರಿ ನೀನು ಸುಮ್ಮನಿರಲು |
ಯಾತರವ ನಾನಯ್ಯ ನಿನ್ನಾಧೀನವು ಏಲ್ಲ
ಚೇತನನು ಅಹುದು ನೀ ಚಲಿಸೆ ಚಲಿಸುವನು ||
ತಿಳಿಯೆನ್ನುವುದಕ್ಕಾಗಿ ತಿಳಿಯತಕ್ಕದ್ದು ನೀನೇ
ತಿಳಿಸೋ ಸೋತ್ತಮರು ತಿಳಿದ ಶೇಷ |
ತಿಳಿವಲ್ಲಿ ತಿಳುಪಲ್ಲಿ ತಿಳುವಣಿಕೆ ನೀನಾಗಿ
ಚಲಿಸದಲೇ ಮನ ನಿಲಿಸೋ ಗೋಪಾಲವಿಠಲ ||
Comments