Lali SriHayavadana ಲಾಲಿ ಶ್ರೀಹಯವದನ ಲಾಲಿ ಶ್ರೀರಂಗವಿಠ್ಠಲ
- madhwamaanasa3
- Jun 2, 2023
- 1 min read
Updated: Jan 11
ಲಾಲಿ ಶ್ರೀಹಯವದನ ಲಾಲಿ ಶ್ರೀರಂಗವಿಠ್ಠಲ
ಲಾಲಿ ಶ್ರೀಹಯವದನ ಲಾಲಿ ಶ್ರೀರಂಗವಿಠ್ಠಲ ।
ಲಾಲಿ ಗೋಪಿನಾಥ ಲಕ್ಷ್ಮೀ ಸಮೇತ ಲಾಲಿ ಲಾಲಿ ॥
ಮುದ್ದು ಮಾಣಿಕ್ಯ ಪಿಡಿದ ತೊಟ್ಟಿಲೊಳಗುಳ್ಳ
ಎತ್ತಿದರು ಎನ್ನಯ ಕೈಯೊಳಗೆ ನಿಲ್ಲ ಲಾಲಿ ಲಾಲಿ ॥
ಭಕ್ತರಿಗೆ ವರಗಳನು ಕೊಡುವ ಹೊತ್ತಿಲ್ಲ
ಪುತ್ರನಾ ಎತ್ತಿಕೋ ನಂದಗೋಪಾಲ ಲಾಲಿ ಲಾಲಿ ॥
ಕ್ಷೀರಾಂಬುಧಿಯಲ್ಲಿ ಸಜ್ಜೆಯೊಳಗಿರುವ
ಶ್ರೀರಮಣ ಭಕ್ತರ ಇಚ್ಛೆಗೆ ನಲಿದು ಬರುವ ಲಾಲಿ ಲಾಲಿ ॥
ಕರುಣಾಳು ಹಯವದನ ಕಾಯುವ ತರುವ
ನೀರೆ ಗೋಪಿಯರೊಳು ಮೆರೆವ ಕಡು ಚೆಲುವ ಲಾಲಿ ಲಾಲಿ ॥
ತಾರಮ್ಮಯ್ಯ ತಂದು ತೋರಮ್ಮಯ್ಯ
ಉಡುಪಿಯ ಬಾಲ ಕೃಷ್ಣನ ಮುಖವ ತೋರಮ್ಮಯ್ಯ ॥
ಜೋ ಜೋ ಶ್ರೀಕೃಷ್ಣ ಜೋ ಜೋ ಪರಮಾನಂದ
ಜೋ ಜೋ ಬಾಲ ಮುಕುಂದಗೆ ಜೋ ಜೋ
ಜೋ ಜೋ ಬಾಲ ಮುಕುಂದಗೆ ಜೋ ಜೋ ॥
Comments