Shankaram Karunakaram ಶಂಕರಂ ಕರುಣಾಕರಂ ಭಕ್ತಜನ
- madhwamaanasa3
- Dec 22, 2024
- 1 min read
Updated: Jan 11
ಶಂಕರ ಕರುಣಾಕರ ಭಕ್ತಜನ
ಸರ್ವ ಶಂಕಾ ಪರಿಹಾರಕ ಅಭಯಂಕರ ||
ಪಂಚವದನ ತ್ರಿನೇತ್ರಧರ
ಪಂಚೇಂದ್ರಿಯ ತ್ರಿಮನೋವೃತ್ತಿಗಳ ನಿಯಂತ್ರಕ |
ಅಮಂಗಳ ವೇಷ ಭೂಷಿತ ಮಹೇಶ್ವರ
ಅನಿತ್ಯ ಭೂಷಣಗಳ ಕಳಚುವ ಪರಮಮಂಗಳನು ||
ಚರ್ಮ ವಸ್ತ್ರಾಲಂಕೃತ ಚಂದ್ರಶೇಖರ
ಮನೋವಿಕಾರಹರ ಶಸ್ತ್ರಧರ ಮಹಾದೇವನು |
ಚಿತಾಭಸ್ಮವ ಧರಿಸುವ ಚಿದಾನಂದನ
ಚಿತ್ತ ಚಾಂಚಲ್ಯವ ಪರಿಹರಿಸುವ ಚಿತ್ತೇಶನೇ ||
ಬಿಲ್ವಪತ್ರಾದಿಗಳಿಂದಾಲಂಕೃತ ಪಶುಪತಿಯೇ
ಭವಪಾಶವಿಧ್ವಂಸಕ ಕಾಲಭೈರವನಿವನು |
ಮತಿಭ್ರಾಂತಿ ಪರಿಹರಿಸುವ ಸೋಮಶೇಖರನು
ಅಹಂಕಾರ ಸಮೂಲನಾಶಕ ಕೇದಾರೇಶ್ವರನು ||
ತ್ರಿಗುಣ ನೃತ್ಯ ಛೇದಕ ತ್ರ್ಯಂಬಕ
ಕಾಮಪ್ರಳಯಕರ ರಾಮೇಶ್ವರನೇ |
ದಾಕ್ಷಾಯಣಿ ತನಯ ವಿಶ್ವಂಭರ ಜನಕ
ಹಿಮಗಿರಿವಾಸ ಗೌರಿಶಂಕರ ಹಿಮಗಿರಿವಾಸ ಗೌರಿಶಂಕರ ||
Comments