top of page

Shambho Swayambhu ಶಂಭೋ ಸ್ವಯಂಭೂ ಸಂಭವ

  • Writer: madhwamaanasa3
    madhwamaanasa3
  • Dec 22, 2024
  • 1 min read

Updated: Jan 11

ಶಂಭೋ ಸ್ವಯಂಭೂ ಸಂಭವ |

ನಂಬಿದೆ ಕಾಯೋ ಜಂಭಾರಿ ನುತ ಭವ |


ಅಂಬರಪುರ ಹರ ಸಾಂಬ ತ್ರಯಂಬಕ |

ಶಂಭರಾರಿಪು ಗಂಭೀರ ಕರುಣಿ | ಅ.ಪ. |


ಭಸಿತ ಭೂಷಿತ ಶರೀರ ಭಕ್ತರೋದ್ಧಾರ ವಿಷಕಂಠ ದುರಿತಹರ |

ಪಶುಪತಿ ಫಣಿಪ ಹಾರ ಪಾವನ ಕಾರಿ ತ್ರಿಶೂಲ ಡಮರುಗ ಧರ |

ನೊಸಲನಯನ ವಿಕಸಿತಾಂಬುಜ ಮೊಕ ಶಶಿಧರ ಮತ ರಕ್ಕಸ ಮದ ಮರ್ದನ|

ಫಸಣಿಗೊಳಿಪ ತಾಮಸವ ಕಳೆದು ಮಾನಸದಲಿ ರಂಗನ ಬಿಸಜ ಪಾದವ ತೋರೋ | ೧ |


ರಜತ ಪರ್ವತ ನಿವಾಸ ನಿರ್ಮಲ ಭಾಸ ಗಜದೈತ್ಯ ನಾಶ ಗಿರೀಶ |

ಸುಜನರ ಮನೋ ವಿಲಾಸ ವ್ಯೋಮಕೇಶ ತ್ರಿಜಗದಲ್ಲಣ ಗೌರೀಶ |

ಅಜಸುತ ನಧ್ವರ ಭಜನೆಯ ಕೆಡಿಸಿದೆ | ಅಜಗರ ಮಂದಿರ ಗಜಮುಖ ಜನಕನೆ|

ಗಜಗಮನಾ| ಮುನಿ ತನುಜರ ಕಾಯ್ದನೆ ವೃಜಮುನಿ ವಂದಿತ ಭಜಿಸುವೆ ನಿನ್ನನು | ೨ |


ಮಧುರಾಪುರ ನಿಲಯ ಮೃತ್ಯುಂಜಯ ಸದಮಾಲ ಸುಮನಗೇಯಾ |

ಸದಾ ನಮಿಪರ ಹೃದಯದೊಳಗುಳ್ಳ ಭಯ ಸದೆಯುತ್ತ ಕೊಡು ಅಭಯ |

ಸದಾಶಿವ ಜಾನ್ಹವೀ ಧರಾ ಕೃತಮಾಲಾ ನದಿ ತೀರದಿ ವಾಸವಾಗಿಪ್ಪ |

ಸೌಂದರ್ಯ ಮಧಿರಿಪು ವಿಜಯ ವಿಠಲನ ಪಾದಕೆ ಮಧುಪನೆನಿಪ ಪಂಚವದನ ಕೈಲಾಸದ | ೩ |

 
 
 

Recent Posts

See All
Shankaram Karunakaram ಶಂಕರಂ ಕರುಣಾಕರಂ ಭಕ್ತಜನ

ಶಂಕರ ಕರುಣಾಕರ ಭಕ್ತಜನ ಸರ್ವ ಶಂಕಾ ಪರಿಹಾರಕ ಅಭಯಂಕರ || ಪಂಚವದನ ತ್ರಿನೇತ್ರಧರ ಪಂಚೇಂದ್ರಿಯ ತ್ರಿಮನೋವೃತ್ತಿಗಳ ನಿಯಂತ್ರಕ | ಅಮಂಗಳ ವೇಷ ಭೂಷಿತ ಮಹೇಶ್ವರ ಅನಿತ್ಯ...

 
 
 
Bideno Bideno ninna ಬಿಡೆನೋ ಬಿಡೆನೋ ನಿನ್ನ ಚರಣ

ಬಿಡೆನೋ ಬಿಡೆನೋ ನಿನ್ನ ಚರಣ ಕಮಲವ ಎನ್ನ ಹೃದಯ ಮಧ್ಯದೊಳಿಟ್ಟು ಭಜಿಸುವೆ ಅನುದಿನ ಬಲಿಯ ದಾನವ ಬೇಡಿ ಅಳದೆ ಬ್ರಹ್ಮಾಂಡ ನಳಿನೋದ್ಭವ ಬಂದು ಪಾದವ ತೊಳೆಯೆ ಉಗುರಿನ...

 
 
 
Uma Katyayini ಉಮಾ ಕಾತ್ಯಾಯಿನೀ ಗೌರೀ

ಉಮಾ ಕಾತ್ಯಾಯಿನೀ ಗೌರೀ ದಾಕ್ಷಾಯಿಣೀ ಹಿಮವಂತ ಗಿರಿಯ ಕುಮಾರಿ ರಮೆಯರಸನ ಪದಕಮಲಮಧುಪೆ ನಿತ್ಯ ಅಮರವಂದಿಪೆ ಗಜಗಮನೆ ಭವಾನೀ ಪನ್ನಗವೇಣೀ ಶರ್ವಾಣೀ ಕೋಕಿಲವಾಣಿ ಉನ್ನತಗುಣಗಣ...

 
 
 

コメント


9916678573

©2022 by Madhwamaanasa. 

bottom of page