Manava Shodhisabeku Nithya ಮನವ ಶೋಧಿಸಬೇಕು ನಿತ್ಯಾ
- madhwamaanasa3
- May 27
- 1 min read
ಮನವ ಶೋಧಿಸಬೇಕು ನಿತ್ಯಾ
ದಿನ ದಿನ ಮಾಡುವ ಪಾಪ ಪುಣ್ಯದ ವೆಚ್ಚ
||ಮನವ||
ಧರ್ಮ ಅಧರ್ಮ ವಿಂಗಡಿಸಿ
ಅಧರ್ಮದ ನರಗಳ ಬೇರ ಕತ್ತರಿಸಿ ನಿರ್ಮಲಾಚಾರದಿ ಚರಿಸಿ ||1||
ಪರಬೊಮ್ಮ ಮೂರುತಿ ಪಾದಕಮಲವ ಭಜಿಸಿ
||ಮನವ||
ತನುವ ಖಂಡಿಸಿ ಒಮ್ಮೆ ಮಾಣೋ
ನಿನ್ನಮನವ ದಂಡಿಸಿ
ಪರಮಾತ್ಮನ್ನ ಕಾಣೋ||ತನುವ||
ಕೊನೆಗೆ ನಿನ್ನೊಳಗೆ ನೀ ಜಾಣೋ ||2||
ಮುಕ್ತಿ ನಿನಗೆ ದೂರಿಲ್ಲವು ಒಂದೇ ಗೇಣೊ
||ಮನವ||
ಆತನವರಿಗೆ ಕೇಡಿಲ್ಲ ,ಅವ ಪಾತಕ
ಪತಿತ ಸಂಗವ ಮಾಡುವನಲ್ಲ
||ಆತನವರಿಗೆ||
ನೀತಿವಂತರು ಕೇಳಿರೆಲ್ಲ ||3||
ನಮಗಾತನೆ ಗತಿ ಈವ ಪುರಂದರವಿಠಲ
||ಮನವ||
Comments