Aagasake Modave ಅಗಸಕೆ ಮೋಡವೆ ಚೆಂದ
- madhwamaanasa3
- Aug 20, 2023
- 1 min read
Updated: Jan 11
ಅಗಸಕೆ ಮೋಡವೆ ಚೆಂದ
ಧರೆಗೆ ನೀರು ಅಂದ |
ತನುಗೆ ಇಂದ್ರಿಯ ಚೆಂದ
ಎನಗೆ ಆತ್ಮವೆ ಅಂದ ||
ಅಗ್ನಿಗೆ ಜ್ವಾಲೆಯು ಚೆಂದ
ವಾಯುವಿಗೆ ವೇಗವೆ ಅಂದ |
ಇಂದ್ರಿಯಕೆ ಮನವು ಚೆಂದ
ಎನಗೆ ಆತ್ಮವೆ ಅಂದ ||
ಹೂವಿಗೆ ಪರಿಮಳ ಅಂದ
ಹಣ್ಣಿಗೆ ಸವಿಯೇ ಚೆಂದ |
ಮನಕೆ ಬುದ್ಧಿಯೆ ಚೆಂದ
ಎನಗೆ ಆತ್ಮವೆ ಅಂದ ||
ಧನಕೆ ಸಂಗ್ರಹವೆ ಚೆಂದ
ಗೃಹಕೆ ಶೃಂಗಾರವೆ ಅಂದ |
ಕಾಯಕೆ ಸೌಖ್ಯವೆ ಚೆಂದ
ಎನಗೆ ಆತ್ಮನೊಲವೆ ಅಂದ ||
ಸಾಗರಕೆ ಸೂರ್ಯನೆ ಚೆಂದ
ಪ್ರಕೃತಿಗೆ ಸಿರಿಯೆ ಅಂದ |
ಜೀವಕ್ಕೆ ಆತ್ಮವೆ ಚೆಂದ
ಆತ್ಮಗೆ ಆತ್ಮನೆ ಅಂದ ||
Comments