ಭಗವಂತನ ರೂಪ ಹೇಗೆ ?
- madhwamaanasa3
- Aug 20, 2023
- 1 min read
ನಾವು ಭಗವಂತನ ಯಾವರೂಪವನ್ನು ಧ್ಯಾನಿಸುತ್ತೇವೋ ಅದೇ ರೂಪದಲ್ಲಿ ಭಗವಂತನು ನಮಗೆ ದರ್ಶನವೀಯುತ್ತಾನೆ. ಸಗುಣೋಪಾಸಕರಿಗೆ ಸಗುಣನಾಗಿ, ನಿರ್ಗುಣೋಪಾಸಕರಿಗೆ ನಿರ್ಗುಣನಾಗಿ ವ್ಯಕ್ತನಾಗುತ್ತಾನೆ. ಆತನಿಗೆ ಯಾವುದೇ ನಿರ್ದಿಷ್ಟವಾದ ಆಕಾರಗಳಿಲ್ಲ. ಭಕ್ತರ ಇಚ್ಛೆಯಂತೆ ತನ್ನ ಸ್ವರೂಪವನ್ನು ಬದಲಾಯಿಸುತ್ತಾನೆ(ಹಾಗಾದರೆ ಆತನನ್ನು ಸ್ವರೂಪರಹಿತನೆಂದು ಸಾರುವಂತಿಲ್ಲ). ಸಕಲ ಬ್ರಹ್ಮಾಂಡದ ಚರಾಚರಗಳೆಲ್ಲವು ಆತನಿಂದಲೆ ಸೃಷ್ಠಿಯಾಗಿರುವುದು. ಅಂದರೆ ನಾವು ಎನನ್ನೇ ಮಾಡಿದರೂ, ಎನನ್ನೇ ಸ್ವೀಕರಿಸಿದರೂ, ಎನನ್ನೇ ಪೂಜಿಸಿದರೂ ಅದು ಅವನದೇ. ಹೀಗಾಗಿ ಎಲ್ಲದರಲ್ಲಿಯೂ ಅವನಿರುವನು, ಅವನಲ್ಲಿಯೇ ಎಲ್ಲವೂ. ಅವನ ಹೊರತು ಬೇರೇನೂ ಇಲ್ಲ. ಯಾವುದರಿಂದ ವ್ಯಕ್ತನಾದರೂ ಅದು ಅವನೆ. ಆದ್ದರಿಂದ ಭಕ್ತರ ಮನೋಭಿಲಾಷೆಯಂತೆ ಅವರಿಗಿಷ್ಟವಾದ ರೂಪದಲ್ಲಿಯೇ ತನ್ನ ದರ್ಶನದ ಭಾಗ್ಯವನ್ನು ಒದಗಿಸುವನು. ಇದನ್ನೇ ಇಟ್ಟುಕೊಂಡು ನಮಗೆ ಹಣ ಇಷ್ಟವಾದದ್ದು ಅದು ನಮ್ಮಲ್ಲಿ ಸಾಕಷ್ಟಿದೆ. ಭಗವಂತ ಪ್ರಸನ್ನನಾಗಿ ನಮಗೆ ದಯಪಾಲಿಸಿದ್ದಾನೆ ನಾವಿನ್ನೇನು ಮಾಡುವುದು ಬೇಡ ಎನ್ನುವಂತಿಲ್ಲ. ಹೀಗೆ ದೊರಕಿರುವುದು ಭಗವಂತನಿಂದಲೇ ಆದರೂ ಅದರಲ್ಲಿ ಸನ್ನಿಧಾನ ವಿಶೇಷವಿಲ್ಲ. ಅಂದರೆ ಜಗತ್ತಿನ ಎಲ್ಲ ಸೃಷ್ಠಿಗಳಲ್ಲಿಯೂ ಆತನು ಏಕರೂಪವಾಗಿ ಅಂತರ್ಯಾಮಿಯಾಗಿದ್ದಾನೆ. ಎಲ್ಲದರಲ್ಲಿಯೂ ಸಮಾನ ಅಂಶದಿಂದಿದ್ದಾನೆ. ಆದರೆ ಭಕ್ತರ ಧ್ಯಾನ ಸ್ವರೂಪದಲ್ಲಿ ಕಾಣಿಸಿಕೊಂಡಾಗ ಆ ಸ್ವರೂಪದಲ್ಲಿ ತನ್ನ ಸನ್ನಿಧಾನ ವಿಶೇಷದಿಂದ ಪವಿತ್ರಗೊಳಿಸಿರುತ್ತಾನೆ. ಹೀಗಾಗಿ ಅದರಿಂದ ನಮಗೆ ಸದ್ಗತಿಯಾಗುವುದರಲ್ಲಿ ಸಂಶಯವೇ ಇಲ್ಲ.
Comments