top of page

Shambho Swayambhu ಶಂಭೋ ಸ್ವಯಂಭೂ ಸಂಭವ

  • Writer: madhwamaanasa3
    madhwamaanasa3
  • Dec 22, 2024
  • 1 min read

Updated: Jan 11

ಶಂಭೋ ಸ್ವಯಂಭೂ ಸಂಭವ |

ನಂಬಿದೆ ಕಾಯೋ ಜಂಭಾರಿ ನುತ ಭವ |


ಅಂಬರಪುರ ಹರ ಸಾಂಬ ತ್ರಯಂಬಕ |

ಶಂಭರಾರಿಪು ಗಂಭೀರ ಕರುಣಿ | ಅ.ಪ. |


ಭಸಿತ ಭೂಷಿತ ಶರೀರ ಭಕ್ತರೋದ್ಧಾರ ವಿಷಕಂಠ ದುರಿತಹರ |

ಪಶುಪತಿ ಫಣಿಪ ಹಾರ ಪಾವನ ಕಾರಿ ತ್ರಿಶೂಲ ಡಮರುಗ ಧರ |

ನೊಸಲನಯನ ವಿಕಸಿತಾಂಬುಜ ಮೊಕ ಶಶಿಧರ ಮತ ರಕ್ಕಸ ಮದ ಮರ್ದನ|

ಫಸಣಿಗೊಳಿಪ ತಾಮಸವ ಕಳೆದು ಮಾನಸದಲಿ ರಂಗನ ಬಿಸಜ ಪಾದವ ತೋರೋ | ೧ |


ರಜತ ಪರ್ವತ ನಿವಾಸ ನಿರ್ಮಲ ಭಾಸ ಗಜದೈತ್ಯ ನಾಶ ಗಿರೀಶ |

ಸುಜನರ ಮನೋ ವಿಲಾಸ ವ್ಯೋಮಕೇಶ ತ್ರಿಜಗದಲ್ಲಣ ಗೌರೀಶ |

ಅಜಸುತ ನಧ್ವರ ಭಜನೆಯ ಕೆಡಿಸಿದೆ | ಅಜಗರ ಮಂದಿರ ಗಜಮುಖ ಜನಕನೆ|

ಗಜಗಮನಾ| ಮುನಿ ತನುಜರ ಕಾಯ್ದನೆ ವೃಜಮುನಿ ವಂದಿತ ಭಜಿಸುವೆ ನಿನ್ನನು | ೨ |


ಮಧುರಾಪುರ ನಿಲಯ ಮೃತ್ಯುಂಜಯ ಸದಮಾಲ ಸುಮನಗೇಯಾ |

ಸದಾ ನಮಿಪರ ಹೃದಯದೊಳಗುಳ್ಳ ಭಯ ಸದೆಯುತ್ತ ಕೊಡು ಅಭಯ |

ಸದಾಶಿವ ಜಾನ್ಹವೀ ಧರಾ ಕೃತಮಾಲಾ ನದಿ ತೀರದಿ ವಾಸವಾಗಿಪ್ಪ |

ಸೌಂದರ್ಯ ಮಧಿರಿಪು ವಿಜಯ ವಿಠಲನ ಪಾದಕೆ ಮಧುಪನೆನಿಪ ಪಂಚವದನ ಕೈಲಾಸದ | ೩ |

 
 
 

Recent Posts

See All
Manava Shodhisabeku Nithya ಮನವ ಶೋಧಿಸಬೇಕು ನಿತ್ಯಾ

ಮನವ ಶೋಧಿಸಬೇಕು ನಿತ್ಯಾ ದಿನ ದಿನ ಮಾಡುವ ಪಾಪ ಪುಣ್ಯದ ವೆಚ್ಚ ||ಮನವ|| ಧರ್ಮ ಅಧರ್ಮ ವಿಂಗಡಿಸಿ ಅಧರ್ಮದ ನರಗಳ ಬೇರ ಕತ್ತರಿಸಿ ನಿರ್ಮಲಾಚಾರದಿ ಚರಿಸಿ ||1|| ಪರಬೊಮ್ಮ...

 
 
 
Devi Suktam ದೇವಿ ಸೂಕ್ತಂ

ಓಂ ಸಿಂಹಸ್ಥಾ ಶಶಿಶೇಖರಾ ಮರಕತಪ್ರಖ್ಯೈಶ್ಚತುರ್ಭಿರ್ಭುಜೈಃ ಶಂಖಂ ಚಕ್ರಧನುಶ್ಶರಾಂಶ್ಚ ದಧತೀ ನೇತ್ರೈಸ್ತ್ರೀಭಿಶ್ಶೋಭಿತಾ | ಆಮುಕ್ತಾಂಗದಹಾರಕಂಕಣರಣತ್ಕಾಂಚೀರಣನ್ನೂಪುರಾ...

 
 
 
Hayagreeva Sampan Stotra ಹಯಗ್ರೀವಸಂಪದಾಸ್ತೋತ್ರ

ಹಯಗ್ರೀವ ಹಯಗ್ರೀವ ಹಯಗ್ರೀವ ಯೋ ವದೇತ್ | ತಸ್ಯ ನಿಃಸರತೇ ವಾಣೀ ಜುಹ್ನುಕನ್ಯಾಪ್ರವಾಹವತ್ || ೧ || ಹಯಗ್ರೀವ ಹಯಗ್ರೀವ ಹಯಗ್ರೀವೇತಿ ವಾದಿನಮ್ | ನರಂ ಮುಂಚಂತಿ ಪಾಪಾನಿ...

 
 
 

Comments


9916678573

©2022 by Madhwamaanasa. 

bottom of page