top of page
R.jpg
madhwacharya

​ಶುದ್ಧ ಜ್ಞಾನವುಳ್ಳವರು ಎಲ್ಲ ಕಾಲದಲ್ಲೂ ವಿರಳರು. ಅದೇ ಅರೆಬರೆ ಜ್ಞಾನವುಳ್ಳವರ ಸಂಖ್ಯೆ ಯಾವಾಗಲೂ ಜಾಸ್ತಿ.  ಎಲ್ಲ ಮತಗಳೂ ಎಲ್ಲ ಕಾಲದಲ್ಲೂ ಇರುವುದೇ ಸಾರ್ವತ್ರಿಕ ಸತ್ಯ ಹೊರತು ಸಿದ್ಧಾಂತ ಎಷ್ಟೇ ಸ್ಪಷ್ಟವಾಗಿದ್ದರೂ, ತರ್ಕಬದ್ಧ, ಪ್ರಮಾಣ ಪ್ರಮಿತವಾಗಿದ್ದರೂ ಸಹ ಅದು ಎಲ್ಲರಿಂದ ಮಾನ್ಯವಾಗಲು ಸಾಧ್ಯವಿಲ್ಲ.

​ಮಧ್ವ ಸಿದ್ಧಾಂತ:

 

೧) ಶ್ರೀ ಹರಿಯೇ ಪರಬ್ರಹ್ಮನು (ಹರಿಃ ಪರ ತರಃ)

 

೨) ಜಗತ್ತು ಸತ್ಯ (ಸತ್ಯಂ ಜಗತ್)

 

೩) ಜೀವಾತ್ಮ ಮತ್ತು ಪರಮಾತ್ಮರಲ್ಲಿ ಭೇದವಿದೆ (ತತ್ವತೋ ಭೇದಃ)

 

೪) ಜೀವಾತ್ಮರೆಲ್ಲರೂ ಪರಮಾತ್ಮನ ಸೇವಕರು (ಜೀವ ಗಣಃ ಹರೇರನುಚರಃ)

 

೫) ಜೀವಾತ್ಮ- ಪರಮಾತ್ಮರಲ್ಲಿ ನೀಚೋಚ್ಚ ಭಾವವಿದೆ (ನೀಚೋಚ್ಚ ಭಾವಂ ಗತಃ)

 

೬)ಸ್ವಾಭಾವಿಕ ಸ್ವರೂಪದ ಸುಖದ ಅನುಭವವೇ ಮುಕ್ತಿ (ಮುಕ್ತಿರ್ನೈಜ ಸುಖಾನುಭೂತಿಃ)

 

೭) ನಿರ್ಮಲವಾದ ಭಕ್ತಿಯೇ ಮುಕ್ತಿಗೆ ಸಾಧನ (ಅಮಲಾ ಭಕ್ತಿಶ್ಚ ತತ್ ಸಾಧನಂ)

 

೮) ಪ್ರತ್ಯಕ್ಷ, ಅನುಮಾನ, ಆಗಮ ಎಂಬ ಮೂರು ಪ್ರಮಾಣಗಳು (ಪ್ರತ್ಯಕ್ಷ, ಅನುಮಾನ, ಆಗಮ ತ್ರಿತಯಂ ಪ್ರಮಾಣಂ)

 

೯) ಎಲ್ಲ ವೇದಗಳಲ್ಲೂ ಪ್ರತಿಪಾದ್ಯನಾದ ದೇವರು ಶ್ರೀಹರಿಃ (ಅಖಿಲಾಮ್ನಾಯೈಕೋ ವೇದ್ಯೋ ಹರಿಃ)

Madhwacharya

"ಭಗ​ವಾನ"

​ಅನಂತ ಗುಣಪರಿಪೂರ್ಣನಾದುದರಿಂದಲೇ ಭಗವಾನ. 'ಭಗ' ಎಂದರೆ ಆರು ಗುಣಗಳು. ಈ ಆರು ಗುಣಗಳಲ್ಲಿಯೇ ಭಗವಂತನ ಅನಂತ ಗುಣಗಳು ಅಂತರ್ಗತವಾಗಿವೆ.

"ಓಂಕಾರ"

ಅಕಾರಾದ್ಯತಿಶಾಂತಾಂತಃ ಸೋಯಮಷ್ಟಾಕ್ಷರೋ ಮತಃ - ತಂತ್ರಸಾರ 

​"ಅಕಾರ, ಉಕಾರ, ಮಕಾರ, ನಾದ, ಬಿಂದು, ಕಲಾ, ಶಾಂತ, ಅತಿಶಾಂತ ಎಂಬ ಎಂಟು ಅಕ್ಷರಗಳನ್ನೊಳಗೊಂಡ ಓಂಕಾರವೂ ನನ್ನನ್ನೇ ಪ್ರತಿಪಾದಿಸುತ್ತದೆ. ಎಂಟು ಅಕ್ಷರಗಳ ಈ ಓಂಕಾರ ವಿಶ್ವ, ತೈಜಸ, ಪ್ರಾಜ್ಞ, ತುರೀಯ, ಆತ್ಮ, ಅಂತರಾತ್ಮ, ಪರಮಾತ್ಮ ಹಾಗೂ ಜ್ಞಾನಾತ್ಮ ಎಂಬ ನನ್ನ ಎಂಟು ರೂಪಗಳನ್ನು ಪ್ರತಿಪಾದಿಸುತ್ತದೆ.

01

'ಸ್ಮೃತ್ವಾ ಹರಿಂ ಸಮುತ್ಥಾಯ'

ಯಾರ ಪ್ರೇರಣೆಯಿಲ್ಲದೆ ಏನೂ ನಡೆಯದೋ, ಯಾರಿಂದಲೇ ಏಲ್ಲವೂ ನಡೆಯುವುದೋ ಅಂಥ ಹರಿಯನ್ನು ನೆನೆದು ಎದ್ದೇಳಬೇಕು.

02

ಸಂತತಂ ಚಿಂತಯೇನಂತಂ ಅಂತಃಕಾಲೇ ವಿಶೇಷತಃ

03

ಬಹುಚಿತ್ರ ಜಗತ್ ಬಹುಧಾಕರಣಾತ್ ಪರಶಕ್ತಿಃ ಅನಂತ ಗುಣಃ ಪರಮಾ

04

ಹರಿಃ ಸರ್ವೋತ್ತಮ 

​ವಾಯು ಜೀವೋತ್ತಮ

​ಮುಕ್ತಿಯಾಗುವವರೆಗೂ ಸುಖದುಃಖಗಳಲ್ಲಿ ಸಂಪೂರ್ಣ ಸಮಭಾವ, ವೈಷಯಿಕ ಸುಖದ ಸರ್ವಾತ್ಮನಾ ತ್ಯಾಗ ಯಾರಿಗೂ ಸಾಧ್ಯವಿಲ್ಲ.

ಜ್ಞಾನ, ಭಕ್ತಿ, ವೈರಾಗ್ಯ ಹಾಗೂ ಇವುಗಳ ಸಾಧನದ ಹೊರತಾಗಿ ಬೇರೆನನ್ನೂ ಬಯಸದವನು ಶುಭಾಶುಭಪರಿತ್ಯಾಗೀ ಎನಿಸುವನು.

​ಭಗವಂತನಿಗೆ ಎಲ್ಲ ಅವಯವಗಳಲ್ಲೂ ಎಲ್ಲಾ ಅವಯವಗಳ ಶಕ್ತಿಯಿದೆ. ಆದ್ದರಿಂದಲೇ ಅವನನ್ನು ಎಲ್ಲೆಡೆಯೂ ಪಾಣಿಪಾದಾದಿಗಳನ್ನು ಉಳ್ಳವನು ಎನ್ನಲಾಗುತ್ತದೆ. 

ಸರಿಯಾದ ಜ್ಞಾನವಿಲ್ಲದೇ ಮಾಡುವ ಧ್ಯಾನಕ್ಕಿಂತ ಭಗವದ ಜ್ಞಾನವೇ ಮೇಲು.ಜ್ಞಾನಪೂರ್ವಕವಾದ ಧ್ಯಾನಕ್ಕಿಂತ ಫಲಾಭೀಲಾಷೆ ಇಲ್ಲದೇ ಮಾಡಿದ ಧ್ಯಾನವು ಹೆಚ್ಚಿನದು.

ರಕ್ತಾಂಬರೋ ರಕ್ತತನುಃ ರಕ್ತಮಾಲ್ಯಾನುಲೇಪನಃ

ಮಹೋದರೋ ಗಜಮುಖಃ ಪಾಶದಂತಾಂಕುಶಾಭಯೇ

ಬಿಭ್ರದ್ಧ್ಯೇಯೋ ವಿಘ್ನಹರಃ ಕಾಮದಸ್ತ್ವರಯಾ ಹ್ಯಯಂ

​ಯಾವ ಕ್ರಿಯೆಗೂ ನಾನು ಸ್ವತಂತ್ರ ಕರ್ತೃವಲ್ಲ. ಎಲ್ಲ ಕ್ರಿಯೆಗಳಿಗೂ ದೇವರೇ ಸ್ವತಂತ್ರ ಕರ್ತೃ. ಎಲ್ಲ ಕರ್ಮಗಳು ಆತನ ಪೂಜೆ, ಆದರೂ ಆ ಭಗವಂತನ ದಯೆಯಿಂದ ಈ ಪೂಜೆ ನಾನು ಮಾಡಿದೆ.ಭಗವಂತನ ದಯೆಯಿಲ್ಲದೇ ಇದು ಸಾಧ್ಯವಿಲ್ಲ.

ಕುರು ಭುಂಕ್ಷ್ವ ಚ ಕರ್ಮ ನಿಜಂ ನಿಯತಂ ಹರಿಪಾದವಿನಮ್ರಮಧಿಯಾ ಸತತಂ |

​ಹರಿರೇವ ಪರೋ ಹರಿರೇವ ಗುರುರ್ಹರಿರೇವ ಜಗತ್ಪಿತೃಮಾತೃಗತಿಃ ||

ನಿತ್ಯಾನಿತ್ಯ ಜಗದ್ಧಾತ್ರೇ ನಿತ್ಯಾಯ ಜ್ಞಾನಮೂರ್ತಯೇ |

ಪೂರ್ಣಾನಂದಾಯ ಹರಯೇ ಸರ್ವಯಜ್ಞಭುಜೇ ನಮಃ ||

9916678573

©2022 by Madhwamaanasa. 

bottom of page