top of page
madhwamaanasa logo
Sri RaghavendraTeertharu

​ಸ್ವಹಿತಾಸಕ್ತಿರಹಿತ ಸೇವೆಯಲ್ಲಿ ಸದಾ ತೊಡಗಿಕೊಂಡಿರುವುದೇ ಪರಮೋತ್ಕೃಷ್ಠ ಜೀವನ.

ಸ್ವಯಂ ಪ್ರೇರಣೆ ಮತ್ತು ಉತ್ಸಾಹದಿಂದ ನಿರುತ ಸೇವೆಯ ಮಾಡೋಣ 

ನೀಲಮೇಘ ಶ್ಯಾಮ ಅಂಬರದಿಂದ ಅಂಬುಜ ಮಂದಿರಕೆ ಬಾರೋ

ನಂದಾದೀವಿಗೆ ಬೆಳಗಿಸಲು ಪ್ರೇಮದಿ ಕಾದಿರುವೆ

​ಹೃದಯ ದ್ವಾರವ ತೆರೆದು ಸ್ವಾಗತಿಸಲು ನಿಂದಿರುವೆ.

ಸ್ನೇಹ ಸಂಕೋಲೆ ಈ ಬಾಳ ಸಂಜೀವಿನಿ

ಜೀವನ ರಂಗೋಲಿಯ ಚಿತ್ತಾರ

ನಿರುತ ಅಂತರಂಗದ ಅನಾವರಣ

​ಇದು ನಿತ್ಯ ನೂತನ ಅಜರಾಮರ 

ನನ್ನ ಹೃದಯವು ಏನನ್ನು ಬಯಸುತ್ತದೆಯೆಂಬುದನ್ನು ತಿಳಿದು, ಅದನ್ನು ನಾನೇ ನಿರಾಕರಿಸುವುದರಿಂದ ಆಧ್ಯಾತ್ಮಿಕ ಪರಿಶುದ್ಧತೆಯು ಸಾಧ್ಯ 

ತೃಣ ಭ್ರೂಣಕೆ ಪ್ರಾಣವನಿತ್ತಿರುವೆ

ಮಾಂಸದ ಮುದ್ದೆಯ ನೀ ಧರಿಸಿರುವೆ

ನಿನ್ನ ತನು ಮನಗಳು ಎನಗಾಗಿ ಮಿಡಿದಿವೆ

​ಜೀವನದುಸಿರಾಗೆನ್ನನು ನೀ ಪೊರೆದಿರುವೆ 

ಅಂತರಂಗದ ಕೃಷಿಯ ಮಾಡೋಣ

ಬಹಿರಂಗದಲಿ ಬೆಳೆಯೋಣ

ಮನದ ಕಲ್ಮಶವನು ಕಿತ್ತೆಸೆದು

​ಶಕ್ತಿ ಅನ್ವೇಷಣೆಯಲಿ ತೊಡಗೋಣ.

01

ದೇಹ ಸಂರಕ್ಷಣೆಗಾಗಿ ಬದುಕುವುದು ವ್ಯರ್ಥ. ಎಷ್ಟು ಜೋಪಾನ ಮಾಡಿದರೂ ಸಹ ಒಂದು ದಿನ ಈ ದೇಹ ದೂರವಾಗುವುದು. ಆತ್ಮೋದ್ಧಾರವೇ ಬದುಕಿನ ಮೂಲ ಧ್ಯೇಯ.

02

ಬದುಕು ಬೆಳೆಯದಂತೆ ಬದುಕಬೇಕು.

​ಆಗ ಜ್ಞಾನ, ಬುದ್ಧಿ ಬೆಳೆದು ಶುದ್ಧನಾಗುವೆನು.

03

ನಾನು ನಾನಾಗಿಯೇ ಇರುವುದರಿಂದ ಜೀವನದಲ್ಲಿ ಏನನ್ನು ಕಳೆದುಕೊಳ್ಳುವುದಿಲ್ಲ. ನನ್ನ ಸ್ವಭಾವದ ವಿರುದ್ಧ ಅನ್ಯರಂತಾಗಲೂ ಹೋದಾಗ ದುಃಖವಾಗಬಹುದು.

04

​ನಾನು ಏನಾಗಿದ್ದೇನೆಯೋ ಅದೇ ಆಗಲು ಪ್ರಯತ್ನಪಡಬೇಕು. ನನ್ನ ರೀತಿ ಬೇರೆ ಯಾರೂ ಇಲ್ಲ. ನಾನು ಆಕಸ್ಮಿಕವಾಗಿ ಆದವನಲ್ಲ. ಇಲ್ಲಿ ಭಗವಂತನ ಇಚ್ಛೆಯಿದೆ. ಇಡೀ ಸೃಷ್ಠಿಯಲ್ಲಿ ನಾನು ಒಂದು ವಿಶಿಷ್ಟ ಹಾಗೂ ಅಗತ್ಯ ಜೀವಿ.

ವಿಜ್ಞಾನ ಬದಲಾಗುತ್ತದೆ. ಇವತ್ತಿದ್ದಂತೆ ನಾಳೆ ಇರುವುದಿಲ್ಲ, ಆದರೂ ಅನುಭವವಾಗುತ್ತದೆ.

ದೇವರು ಬದಲಾಗುವುದಿಲ್ಲ. ಇವತ್ತು ಇದ್ದಂತೆಯೇ, ನಿನ್ನೆಯೂ, ನಾಳೆಯೂ ಹಾಗೂ ಅನಂತ ಕಾಲದವರೆಗೂ ಇರುವನು. ಆದರೂ ಅನುಭವವಾಗುವುದಿಲ್ಲ. 

 

 

    ಪ್ರತಿ ದಿನವೂ ಒಂದು ಹೊಸದಾದ ಪರಿಸ್ಥಿತಿಯನ್ನು ಎದುರಿಸುವುದು.

 

    ಪ್ರತಿ ದಿನವು ಏನನ್ನಾದರೂ ಹೊಸತನ್ನು ಕಲಿಯುವುದು.

 

​    ಜನರೊಂದಿಗೆ ಸಂಪರ್ಕ ಬೆಸೆಯುವುದು ಮತ್ತು ಸಂಭಾಷಣೆಯನ್ನು ನಡೆಸುವುದು.

 

    ನನ್ನ ಉತ್ಕಟ ಬಯಕೆಯ ಬಗ್ಗೆ ಚಿಂತಿಸುವುದು ಹಾಗೂ ವಿಕಸನಗೊಳ್ಳವುದು. 

ಬಾಳುವೆಯೆಂಬ ಮನ್ವಂತರದಲಿ
ಜನನವೆಂಬುದೊಂದು ರೂಪಾಂತರ
ಪಂಚಭೂತಗಳ ಸಂಗಮದಲೊದಗಿದ
ದಿವ್ಯ ಭವ್ಯ ಅಗಮ್ಯ ದೇವಾಲಯ

ಹೂಸ ಚಿಗುರು ಹಾಗೂ ನವ್ಯತೆಗಳೇ
ಇಲ್ಲಿ ಜೀವನಾಧಾರ ಪೋಷಕಾಂಶಗಳು
ಪ್ರತಿ ಕ್ಷಣವು ಕಲಿಕೆ ಪ್ರತಿ ದಿನವು ಗಳಿಕೆ
ಉಳಿಕೆಗಳೆ ಜೀವನ ಮೂಲ ಬಂಡವಾಳ

ಜೀರ್ಣವಾದುದೆಲ್ಲದರ ಸಾರಸಂಗ್ರಹವೆ
ಪ್ರತಿ ಜನನ ಹೂಸ ಜೀವನದ ಸೋಪಾನ
ಈ ಸುದಿನದಂದು ಹರ್ಷೋತ್ಸವವಾಗಲಿಯೆಂದು
ನಾವೆಲ್ಲರೂ ಉತ್ಸಾಹದಿಂದ ಹಾರೈಸುವೆವು

ದೃಷ್ಟಿ

ನನ್ನ ದೃಷ್ಟಿ ಹೇಗೋ ಹಾಗೇ ತೆರೆಯುವುದು ಪ್ರಪಂಚ. ಇಷ್ಟವಾದ ವ್ಯಕ್ತಿ/ವಸ್ತುವಿನಲ್ಲಿ ನನಗೆ ಎಲ್ಲವೂ ಚೆಂದ. ಇಷ್ಟವಿರದಿದ್ದರೆ, ಕಾಣುವುದೆಲ್ಲ ದೋಷವೇ.

Sphere on Spiral Stairs

ಎಷ್ಟು ಜೋಪಾನ ಮಾಡಿದರೂ

ಕ್ಷೀಣವಾಯಿತಲ್ಲ ದೇಹ |

ಆವ ಪ್ರಸಾಧನ ವನಸ್ಪತಿಯು

​ಯೌವ್ವನ ತುಂಬಲಿಲ್ಲವಲ್ಲ ||

Sphere on Spiral Stairs
ಜ್ಞಾನ

​ಜ್ಞಾನ ವೃದ್ಧಿಯಾಗಬೇಕಾದರೆ ಮೌನ ಜ್ಞಾನಿಯ ಬಳಿಗಲ್ಲ, ಉಪದೇಶ ನೀಡಲು ಸಿದ್ಧನಾಗಿರುವ ಜ್ಞಾನಿಯ ಹತ್ತಿರ ಹೊಗಬೇಕಾಗಿರುತ್ತದೆ. 

​ಜ್ಙಾನ, ಪ್ರೇಮ ಮತ್ತು ಭಕ್ತಿ ಈ ಮೂರರಿಂದಲೇ ಸೃಷ್ಟಿಯ ಸಕಲ ವೈಭೋಗ.

Icy glaciers

What I Do

01

ಧ್ಯಾನ

02

ಪ್ರಾಣಾಯಾಮ

03

ಜಪ

04

ತಪ

ಶರೀರ

          ಸೃಷ್ಟಿ

 

 

ಇಲ್ಲಿ ಭಾವನೆಗಳನ್ನು ಲಿಪಿಬದ್ಧಗೊಳಿಸಿರುವುದು ಪ್ರಚಾರಕ್ಕಲ್ಲ ಹಾಗೂ ಪ್ರತಿಷ್ಠೆಗಲ್ಲ. ಇದು

  1. ಸ್ವಾಂತ ಸುಖಕ್ಕಾಗಿ(ನಿಜಾನಂದ)  

  2. ಮನೋಬೋಧನೆಗಾಗಿ (ಜಗತ್ತಿನ ಉಪದೇಶಕ್ಕಲ್ಲ) ಮತ್ತು 

  3. ಸ್ವಾಧ್ಯಾಯಕ್ಕಾಗಿ (ನನ್ನನ್ನೇ ನಾನು ಅಧ್ಯಯಿಸಲು; ಸ್ವಯಂ ಸ್ವಾಧ್ಯಾಯ)

 

ಅಪೌರುಷೇಯಗಳಾಧಾರದಿಂದ ರಾತ್ರಿಯಲ್ಲಿ ದಿನವಿಡೀಯ ಚರಿತ್ರೆಯನ್ನು ಮೆಲಕು ಹಾಕಿಕೊಳ್ಳಲು ಸ್ವಾಧ್ಯಾಯ ಹಾಗೂ ಸ್ವಯಂ ಸ್ವಾಧ್ಯಾಯ.

(ಇವುಗಳು ಬ್ಯಾಲಾನ್ಸ್ ಶೀಟಗಳಿದ್ದಂತೆ)

snowy mountains

INNATE LONGING

ಏನೂ ಇಲ್ಲದಿರಬಲ್ಲೆ
​ನಿನ್ನೊಲುಮೆಯಿಲ್ಲದಿರಲಾರೆ

1

Willingly or unwillingly, almost all the human beings on this earth have WORKS ON HAND, unfortunately very few have put their

HANDS ON WORK.

White Structure

2

Knowledge is the Power of discrimination, where as Discipline is a retort against discrimination.

3

The difference between "Change" and "Development" is, it is quite possible to change one's personality overnight by dressing, garments, cosmetics and other accessories. But the development takes a long time, a dedicated enthusiasm, character, heart, knowledge and above all intelligence.

madhwamaanasa

ಶ್ವಾಸವಿರುವವರೆಗೂ ವಿಶ್ವಾಸವಿರಲಿ ಜೀವನದಲಿ |
ನಿಶ್ವಾಸದಲಿ ವಿಸರ್ಜಿಸಿ ಸಕಲ ಕಲ್ಮಶವನು ||

ಇಳೆಗೆ ಬೆಳೆಯುಂಟು ಕಳೆಗೆ ಮಳೆಯುಂಟು
ಶ್ರಮಕೆ ವಿಶ್ರಾಮದಾಸರೆಯಿಹುದು ನೋವಿಗೆ ನಲಿವಿಹುದು |
ಕಾವ್ಯಕೆ ನವ್ಯತೆಯುಂಟು ಭಾವಕೆ ಬದ್ಧತೆಯುಂಟು
ಪಲ್ಲವಿಗೆ ನುಡಿಯಿಹುದು ರಾಗಕೆ ತಾಳವಿಹುದು ||

ಪ್ರೇಮ ಸಂಕೋಲೆಯಿದೆ
ಮಾತ್ಸರ್ಯವ ಬಿಗಿದಟ್ಟಿಸಲು |
ಜ್ಞಾನ ಕಟಾಂಜನವಿಹುದು
ಅಂಧಕಾರದ ಗೃಹ ಬೆಳಗಿಸಲು ||

ಹಗಲಿಗೆ ಇರುಳಿನಿಂದ ತೊಡಕೆ
ರವಿಗೆ ಕಿರಣಗಳಿಂದ ಪ್ರತಿರೋಧವೆ |
ಹೂವಿಗೆ ಎಲೆಗಳಿಂದಾಕ್ಷೇಪವೆ
ಪರತತ್ವದಲಿ ಶರಣಾದವಗೆ ಬಾಳಲಿ ಭಯವೆ ||

ಭೂತವಳಿಯಲು ಭವಿತವ್ಯವಾಗಿದೆ ದಾರಿ
ಸ್ವಾರ್ಥವ ಕಳೆದು ಕೃತಾರ್ಥರಾಗೋಣ |
ಪರಮಾರ್ಥದಲಿ ರತರಾಗಿ ನಿಜಾನಂದವ ಪೊಂದಿ
ಕಳೆಯಿಲ್ಲದ ಕೊಳೆಯಿಲ್ಲದ ದಿನಕರನರ್ಚಿಗಳಾಗೋಣ ||

There is nothing Good in this World


ನೀನೊಲಿದರೆ ಸಕಲವು ಒಲಿವುದು, ನೀ ಮುನಿದರೆ ಅಖಿಲವು ಮುದುರುವುದು.

Self

ಭಗವಂತನ ಜ್ಞಾನ ಕೇವಲ ನಾಲಗೆಯ ಕೊನೆಗೆ ಮಾತ್ರ ಸೀಮಿತವಾಗದೇ,

ಅಂತರಂಗದ ದರ್ಪಣದಲ್ಲಿ ಬಿಂಬಿತವಾಗಿ ಹೊರಗೆ ಲೋಕದ ಚಟುವಟಿಕೆಗಳಲ್ಲಿ ಪ್ರತಿಫಲಿಸಬೇಕು. 

Society

ನಾವು ಯಾರಿಗೂ ಸಹಾಯ ಮಾಡಲು ಸಮರ್ಥರಲ್ಲ. ನಾವು ನಮ್ಮ ಉನ್ನತಿಯನ್ನು ಮಾತ್ರ ನೋಡಿಕೊ‌ಳ್ಳುತ್ತೇವೆ.

ದೇವರು ಮಾತ್ರ ಏಲ್ಲರಿಗೂ ಸಹಾಯ ಮಾಡಬಲ್ಲ.

System

ಸೃಷ್ಟಿಯಲ್ಲಿರುವುದು ಎರಡೇ ಸಂಗತಿಗಳು. ಪ್ರಕೃತಿ ಮತ್ತು ಪುರುಷ.​

ಕಾಲವಾಗಿ ನೀನನಂತ ಚಲಿಸಿದರೆ, ಪರಿವರ್ತನೆಯಲಿ ನಾ ಪುನರಾವರ್ತಿಸುವೆ.

Sanctity

ದೇವರು, ನಿನ್ನಲ್ಲಿ ಏನಿದೆಯೋ ಅದನ್ನೇ ನನಗೆ ಅರ್ಪಿಸೆಂದು ಹೇಳಿದ್ದಾನೆ.

​ನನ್ನಲ್ಲಿ ದೇವರನ್ನು ಬಿಟ್ಟು ಬೇರೇನೂ ಇಲ್ಲ. ಆದ್ದರಿಂದ ಆತನನ್ನೇ ಆತನಿಗೆ ಸಮರ್ಪಣೆ ಮಾಡುತ್ತೇನೆ.

Hill

​ಬದುಕು ಆಸೆ ಮತ್ತು ಜಿಜ್ಞಾಸೆಗಳೆರಡನ್ನು ಒದಗಿಸುತ್ತದೆ. ಜಿಜ್ಞಾಸೆ ವಿಮರ್ಶೆಯ ಕದವನ್ನು ತೆರೆದು ಅಪಾರ ಅವಕಾಶಗಳ, ವಿಕಸನದ ಹಾಗೂ ತೃಪ್ತಿ, ನೆಮ್ಮದಿಯನ್ನು ತಂದು ಕೊಟ್ಟರೆ, ಆಸೆಯು ವ್ಯಾಮೋಹದ ಅಂತಃಪುರದೊಳಿರಿಸಿ ಸೀಮಿತ ಹಾಗೂ ಅನಿಯಮಿತ ಆನಂದದ ಕ್ಷಣಗಳನ್ನು ಹಾಗೂ ಅದರ ನೆನಪಿನ ತಿರುಳನ್ನು ಮಾತ್ರವೇ ನೀಡಿ ಸದಾ ಅತೃಪ್ತಿ ಹಾಗೂ ಇನ್ನೂ ಪಡೆಯಬೇಕೆಂಬ ಹಂಬಲದ ದಾಸನನ್ನಾಗಿಸಿ ಕೃಷಗೊಳಿಸುತ್ತದೆ.

ಸಗುಣೋಪಾಸನೆ ಭಕ್ತಿಯಿಂದಾದರೆ, ನಿರ್ಗುಣೋಪಾಸನೆ ಜ್ಞಾನದಿಂದಾಗುತ್ತದೆ.

ರಾಗ ಮಾಡದ ಕಾರ್ಯವನ್ನು ಅನುರಾಗ ಮಾಡುತ್ತದೆ ಹಾಗೂ ಗ್ರಹಬಲದಿಂದ ದೊರೆಯದ ಯಶಸ್ಸು ಅನುಗ್ರಹ

ಬಲದಿಂದ ಓತಪ್ರೋತವಾಗಿರುತ್ತದೆ.

ಜ್ಞಾನದಿಂದ ಪರಮಾತ್ಮ ಪ್ರಾಪ್ತಿಗೆ ಪ್ರಯಾಸ ಮಾಡಬಹುದು, ಭಕ್ತಿಯಿಂದ ಪರಮಾತ್ಮ ಪ್ರಾಪ್ತಿಗೆ ಪ್ರಸಾದ ದೊರೆಯುತ್ತದೆ.

ವ್ಯವಹಾರದಲ್ಲಿ ಭಾವನೆಯಂತೆ ಕ್ರಿಯೆಯಾಗುತ್ತದೆ. ಸಾಧನೆಯಲ್ಲಿ ಕ್ರಿಯೆಯಂತೆ ಭಾವೋತ್ಪತ್ತಿಯಾಗುವುದು.

ಭೋಗಕ್ಕಿಂತ ತ್ಯಾಗದಲ್ಲಿ ನಿಜವಾದ ಆನಂದವಿದೆ. ಸ್ವಾರ್ಥಕ್ಕಿಂತ ಸೇವೆಯಲ್ಲಿ ಸುಖವಿದೆ.

ನಿನಗಾಗಿ ಯಾವುದನ್ನು ಬಯಸುವುದಿಲ್ಲವೋ ಅದನ್ನು ಬೇರೆಯವರಿಗೆ ಬಯಸದಿರು.

ಉಜ್ಜೀವನದ ಧ್ಯೇಯಕ್ಕಾಗಿ ಹೆಣಗುವುದು ತಪ, ಜೀವನಕ್ಕಾಗಿ ಹಾರಾಡುವುದು ತಾಪ.

ಬಾಹ್ಯ ಸಿರಿಯಿಂದ ಬದುಕು ಭವ್ಯವಾದಿತೇ ಹೊರತು ದಿವ್ಯವಾಗಲಾರದು, ಸುಖ ದೊರೆತೀತೇ ವಿನಃ ಶಾಂತಿ

ದೊರೆಯದು.

 

ಪ್ರಾಪಂಚಿಕ ಸುಖಗಳು :
1) ಆರೋಗ್ಯ ಭಾಗ್ಯ
2) ಸಾಲವಿಲ್ಲದಿರುವಿಕೆ
3) ಆತ್ಮೀಯರಿಂದ ದೂರವಿಲ್ಲದಿರುವುದು
4) ನಂಬಿಕೆಯುಳ್ಳ ಉದ್ಯೋಗ
5) ಭಯವಿಲ್ಲದ ಜೀವನ
6) ಸಜ್ಜನರ ಸಹವಾಸ

9916678573

©2022 by Madhwamaanasa. 

bottom of page