

“ಆ ನೋ ಭದ್ರಾ ಕ್ರತವೋ ಯಂತು ವಿಶ್ವತಃ” (ವಿಶ್ವದ ಎಲ್ಲ ದಿಕ್ಕುಗಳಿಂದಲೂ ಶ್ರೇಷ್ಠ ಆಲೋಚನೆಗಳು ನಮಗೆ ಬರಲಿ). ಜೀವನವು ಮನುಕುಲಕ್ಕೆ ಪರಮಾತ್ಮನು ನೀಡಿದ ಒಂದು ಸುಂದರ ಕೊಡುಗೆಯಾಗಿದೆ. ಇದು ಕತ್ತಲೆಯಿಂದ ಬೆಳಕಿನೆಡೆಯ ಆತ್ಮದ ಪಯಣ. ಇಲ್ಲಿ ಹಗಲು-ರಾತ್ರಿ, ಜನನ-ಮರಣ, ಜ್ಞಾನ-ಅಜ್ಞಾನ, ಸಂಗ್ರಹ-ವಿರಕ್ತಿಗಳ ನಡುವಿನ ನಿರಂತರ ಹೋರಾಟವಿದೆ. ಜೀವಜಗತ್ತಿನ ಈ ಹೋರಾಟಕ್ಕೆ ಮೂಲಕಾರಣವೇ ಆನಂದ/ಅಂತರಂಗ ಸುಖ. ಅಂತರಂಗ ಸುಖವು ಸಂತೋಷ ಹಾಗೂ ಆನಂದದ ಪರಿಪೂರ್ಣಾವಸ್ಥೆಯಾಗಿದೆ. ಆಳವಾದ ತೃಪ್ತಿಯ ಭಾವನೆ, ಬಾಹ್ಯ ಅಡಚಣೆಗಳಿಂದ ವಿಮುಖವಾದ ಸ್ಥಿರ ಮನಸ್ಸಿನ ಭಾವವಾಗಿದೆ. ಈ ವಿಶ್ವವೆಲ್ಲವೂ ಆ ತೃಪ್ತಿಗಾಗಿ ಹಾತೊರೆಯುತ್ತಿದೆ. ಸ್ಥೂಲ ಇಂದ್ರಿಯ ಸುಖ ವಿಷಯಗಳಿಂದ ಹಿಡಿದು ಸೂಕ್ಷ್ಮವಾದ ಆಧ್ಯಾತ್ಮಿಕ ಸಾಧನೆವರೆಗೆ ಎನೆಲ್ಲಾ ತಿಳಿದುಕೊಳ್ಳುತ್ತೇವೆಯೋ, ಅನುಭವಿಸುತ್ತೇವೆಯೋ ಅದೆಲ್ಲವೂ ಮನಸ್ಸಿನ ಮುಖಾಂತರವೇ ಸಾಧ್ಯ. ಮನಸ್ಸಿನ ನಿಯಂತ್ರಣ ಸಾಧ್ಯವಾದರೆ ಅದಕ್ಕಿಂತಲೂ ಉತ್ತಮವಾದ ಮಿತ್ರರಾರೂ ಇಲ್ಲ. ಇಂತಹ ಚಂಚಲ ಪ್ರಕೃತಿಯ ಮನಸ್ಸು ಅಂತರಂಗ ಸುಖವನ್ನು ಬಯಸಿ ಅತ್ತ-ಇತ್ತ ಹುಡುಕಾಡುತ್ತ ವಿಷಯ ವಸ್ತುಗಳೆಡೆಗೆ, ಆಧ್ಯಾತ್ಮಿಕ ಭಾವಗಳೆಡೆಗೆ ಹಾತೊರೆಯುತ್ತದೆ. ಆಕಾಶದ ಮೂಲೆ ಮೂಲೆಗಳಲೆಲ್ಲಾ ಸುತ್ತಾಡಿ ವಿಷಯ ವಸ್ತುಗಳನ್ನು ಸೇವಿಸುತ್ತಾ ವೃತ್ತಾಕಾರ ರೂಪದಲ್ಲಿ ಜೀವನದ ಚಿತ್ರಣವನ್ನು ಚಿತ್ರಿಸುತ್ತದೆ. ಇಲ್ಲಿ ನಾವು ಧರ್ಮ, ಆಧ್ಯಾತ್ಮ,, ಸಮಾಜ, ಕಲೆ, ವಿಜ್ಞಾನ, ತಂತ್ರಜ್ಞಾನ, ಮನೋರಂಜನೆ, ವಿಲಾಸ ಹಾಗೂ ವಿರಾಮ ಇತ್ಯಾದಿ ವಿವಿಧ ಸ್ತರಗಳಲ್ಲಿ ಮನಸ್ಸು ಕಾಣುವ ಅಂತರಂಗ ಸುಖಗಳನ್ನು ಮೆಲಕು ಹಾಕುತ್ತ ಇವು ನಮಗೆಷ್ಟು ಫಲಪ್ರದವೆಂದು ನೋಡುವ ಕಿರು ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಸಾಮಾನ್ಯವಾಗಿ ಯಾವ ವ್ಯಕ್ತಿಯು ತನ್ನೊಂದಿಗೆ ಸೌಹಾರ್ದಯುತವಾಗಿ ವರ್ತಿಸುತ್ತಾನೆಯೋ ಅವನು ವಿಶ್ವದೊಂದಿಗೂ ಹಾಗೆಯೇ ವರ್ತಿಸುತ್ತಾನೆ.
ಋಗ್ವೇದ - ಏಕಂ ಸದ್ ವಿಪ್ರಾ ಬಹುಧಾ ವದಂತಿಃ
ಓಂ ನಿಷು ಸೀದ ಗಣಪತೇ ಗಣೇಷು ತ್ವಾಮಾಹುರ್ವಿಪ್ರತಮಂ ಕವೀನಾಮ್ |
ನ ಋತೇ ತ್ಯತ್ ಕ್ರೀಯತೇ ಕಿಂ ಚನಾರೇ ಮಹಾಮರ್ಕಂ ಮಘವನ್ ಚಿತ್ರಮರ್ಚ ||
(ಹೇ ಇಂದ್ರಿಯ ಗಣಗಳ ನಿಯಾಮಕನಾದ ಭಗವಂತನೇ, ಈ ಇಂದ್ರಿಯ ಗಣಗಳಲ್ಲಿ ನೆಲೆಗೊಂಡು ಕ್ರಿಯೆಗಳನ್ನು ನಡೆಸು. ನೀನು ಸರ್ವೋತ್ತಮನು. ನೀನಿಲ್ಲದೇ ಈ ಇಂದ್ರಿಯಗಳಲ್ಲಿ ಯಾವ ಕ್ರಿಯೆಯು ನಡೆಯುವುದಿಲ್ಲ. ಹಾಗಾಗಿ ನಿನ್ನಲ್ಲಿ ನೀನೆ ನೆಲೆ ನಿಂತು ನಿನ್ನ ಪೂಜೆಯನ್ನು ನೀನೆ ನೆರವೇರಿಸಿಕೋ). 10.112.9
ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ ।
ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ ।
ಸ್ಥಿರೈರಂಗೈಸ್ತುಷ್ಟುವಾಗ್ಁಸಸ್ತನೂಭಿಃ ।
ವ್ಯಶೇಮ ದೇವಹಿತಂ ಯದಾಯುಃ ।
ಓಂ ಸಕ್ತುಮಿವ ತಿತಉನಾ ಪುನಂತೋ ಯತ್ರ ಧೀರಾ ಮನಸಾ ವಾಚಮಕ್ರತ |
ಅತ್ರಾ ಸಖಾಯಃ ಸಖ್ಯಾನಿ ಜಾನತೇ ಭದ್ರೈಷಾಂ ಲಕ್ಷ್ಮೀರ್ನಿಹಿತಾಧಿ ವಾಚ ||
(ಜರಡಿಯಿಂದ ಹಿಟ್ಟು ಸ್ವಚ್ಛ ಮಾಡುವಂತೆ ಮನನ ಚಿಂತನಗಳಿಂದ ಮಾತನ್ನು ಶೋಧಿಸಿ ಜ್ಞಾನಿಗಳು ಭಗವಂತನ ಅನಂತ ಉಪಕಾರವನ್ನು ಚಿಂತಿಸಿ ಮನನಪೂರ್ವಕವಾಗಿ ಉಪದೇಶವನ್ನು ನೀಡುತ್ತಾರೋ ಅಂತಹ ಜ್ಞಾನಿಗಳ ವಾಣಿಯಲ್ಲಿ ಲಕ್ಷ್ಮೀಯು ಭದ್ರವಾಗಿ ನೆಲೆಗೊಂಡಿರುತ್ತಾಳೆ). 10.71.2
ಯಜುರ್ವೇದ-
ಶತಮಾನಂ ಭವತಿ ಶತಾಯುಃ ಪುರುಷ ಶತತೇಂದ್ರಿಯಃ |
ಆಯುಷ್ಯೇವೇಂದ್ರಿಯೇ ಪ್ರತಿ ತಿಷ್ಠತಿ ||
ದೇವರೇ, ಸೃಷ್ಠಿಯ ಎಲ್ಲ ಜೀವಿಗಳು ನನ್ನನ್ನು ಸ್ನೇಹದಿಂದ ಕಾಣುವಂತಾಗಲಿ ಹಾಗೂ ನಾನು ಸಹ ಎಲ್ಲ ಜೀವಿಗಳನ್ನು ಸ್ನೇಹದಿಂದಲೇ ಕಾಣುವಷ್ಟರ ಮಟ್ಟಿಗೆ ಪರಿಶುದ್ಧನಾಗಿಸು ಮತ್ತು ಶಕ್ತಿವಂತನಾಗಿಸು.
ಪ್ರಾತಃ ಪ್ರಭೃತಿ ಸಾಯಾಂತಂ ಸಾಯಾದಿ ಪ್ರಾತರಂತತಃ |
ಯತ್ಕರೋಮಿ ಜಗನ್ನಾಥಃ ತದಸ್ತು ತವ ಪೂಜನಂ ||
ಸಾಮವೇದ-
ಯಾ ಜಾತಾ ಔಷಧಯೋ ದೇವೇಭ್ಯಸ್ತ್ರೀಯುಗಂ ಪುರಾ |
ಮಂದಾಮಿ ಬಭ್ರೂಣಾಮಹಂ ಶತಂಧಾಮಾನಿ ಸಪ್ತ ಚ ||
ಓಂ ಆಪ್ಯಾಯಂತು ಮಮಂಗಾನಿ ವಾಕ್ ಪ್ರಾಣಚಕ್ಷು
ಶ್ರೋತ್ರಮಥೋ ಬಾಲಮಿಂದ್ರಿಯಾಣಿ ಚ ಸರ್ವಾಣಿ |
ಸರ್ವಂ ಬ್ರಹ್ಮೋಪನಿಷದಂ ಮಹಾಮ ಬ್ರಹ್ಮ ನಿರಕುರ್ಯಮ್
ಮ ಮ ಬ್ರಹ್ಮ ನಿರಕರೋದ ನಿರಕರಣಮಸ್ತ್ವನಿರಕರಣಂ ಮೇ ಅಸ್ತು||
ತದಾತ್ಮನಿ ನಿರತೇ ಯಾ ಉಪನಿಷತ್ಸು ಧರ್ಮಸ್ ತೇ ಮಯಿ ಸಂತು ತೇ ಮಯಿ ಸಂತು ||
Sri
ಪುರುಷಸೂಕ್ತ ಓಂ ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರಪಾತ್ ಸ ಭೂಮಿಂ ವಿಶ್ವತೋ ವೃತ್ತ್ವಾ ಅತ್ಯತಿಷ್ಠದ್ ದಶಾಂಗುಲಮ್ ||1|| ಪುರುಷ ಏವೇದಂ ಸರ್ವಂ ಯದ್ ಭೂತಂ ಯಚ್ಚ ಭವ್ಯಮ್ ಊತಾಮೃತತ್ವಸ್ಯೇಶಾನಃ ಯದನ್ನೇನಾತಿರೋಹತಿ ||2|| ಏತಾವಾನಸ್ಯ ಮಹಿಮಾನ್ ಅತೋ ಜಾಯಾಂಶ್ಚ ಪುರುಷಃ ಪಾದೋಸ್ಯ ವಿಶ್ವ ಭೂತಾನಿ ತ್ರಿಪಾದಸ್ಯಾಮೃತಂ ದಿವಿ ||3|| ತ್ರಿಪಾದೂರ್ಧ್ವ ಉದೈತ್ ಪುರುಷಃ ಪಾದೋಸ್ಯೇಹಾಭವಾತ್ ಪುನಃ ತತೋ ವಿಶ್ವಂ ವ್ಯಕ್ರಾಮತ ಸಾಶನಾನಶನೇ ಅಭೀ ||4|| ತಸ್ಮಾತ್ ವಿರಾಳಜಾಯತ ವಿರಾಜೋ ಅಧಿ ಪುರುಷಃ ಸ ಜಾತೋ ಅತ್ಯರಿಚ್ಯತ್ ಪಶ್ಚಾದ್ ಭೂಮಿಮಥೋ ಪುರಃ ||5|| ಯತ್ ಪುರುಷೇಣ ಹವಿಷಾ ದೇವಾ ಯಜ್ಞಮತನ್ವತ ವಸಂತೋ ಅಸ್ಯಾಸಿದಾಜ್ಯಂ ಗ್ರೀಷ್ಮ ಇಧ್ಮಃ ಶರದ್ಧವಿಃ ||6|| ಸಪ್ತಾಸ್ಯಾಸನ್ ಪರಿಧಯಃ ತ್ರೀ ಸಪ್ತ ಸಮಿಧಃ ಕೃತಾಃ ದೇವಾ ಯದ್ ಯಜ್ಞಂ ತನ್ವಾನಾ ಅಬಧ್ನನ್ ಪುರುಷಂ ಪಶುಮ್ ||7|| ತಂ ಯಜ್ಞಂ ಬರ್ಹಿಷಿ ಪ್ರೌಕ್ಷನ್ ಪುರುಷಂ ಜಾತಮಗ್ರತಃ ತೇನ ದೇವಾ ಅಯಜಂತ ಸಾಧ್ಯಾ ಋಷಯಶ್ಚ ಯೇ ||8|| ತಸ್ಮಾತ್ ಯಜ್ಞಾತ್ ಸರ್ವಹುತಃ ಸಂಭೃತಂ ಪೃಷದಾಜ್ಯಮ್ ಪಶೂನ್ ತಾಂಶ್ಚಕ್ರೇ ವಾಯವ್ಯಾನಾರಾಣ್ಯಾನ್ ಗ್ರಾಮಾಶ್ಚ ಯೇ ||9|| ತಸ್ಮಾತ್ ಯಜ್ಞಾತ್ ಸರ್ವಹುತಃ ಋಚಃ ಸಾಮಾನಿ ಜಜ್ಞಿರೇ ಛಂದಾಂಸಿ ಜಜ್ಞಿರೇ ತಸ್ಮಾತ್ ಯಜುಸ್ತಸ್ಮಾದಜಾಯತ ||10|| ತಸ್ಮಾದಶ್ವಾ ಅಜಾಯಂತ ಯೇ ಕೇ ಚೋಭಯಾದತಃ ಗಾವೋ ಹ ಜಜ್ಞಿರೇ ತಸ್ಮಾತ್ ತಸ್ಮಾಜ್ಜಾತಾ ಅಜಾವಯಃ ||11|| ಯತ್ ಪುರುಷಂ ವ್ಯದಧುಃ ಕತಿಧಾ ವ್ಯಕಲ್ಪಯನ್ ಮುಖಂ ಕಿಮಸ್ಯ ಕೌ ಬಾಹೂ ಕಾ ಊರೂ ಪಾದಾ ಉಚ್ಯೇತೇ ||12|| ಬ್ರಾಹ್ಮಣೋಸ್ಯ ಮುಖಮಾಸೀತ್ ಬಾಹೂರಾಜನ್ಯಃ ಕೃತಃ ಊರೂ ತದಸ್ಯ ಯದ್ ವೈಶ್ಯಃ ಪದ್ಭ್ಯಾಂ ಶೂದ್ರೋ ಅಜಾಯತ ||13|| ಚಂದ್ರಮಾ ಮನಸೋ ಜಾತಃ ಚಕ್ಷೋಃ ಸೂರ್ಯೋ ಅಜಾಯತ ಮುಖಾದಿಂದ್ರಶ್ಚಾಗ್ನಿಶ್ಚ ಪ್ರಾಣಾದ್ ವಾಯುರಜಾಯತ ||14|| ನಾಭ್ಯಾ ಆಸೀದಂತರಿಕ್ಷಂ ಶೀರ್ಷ್ಣೋ ದ್ಯೌಃ ಸಮವರ್ತತ ಪದ್ಭ್ಯಾಂ ಭೂಮಿರ್ದಿಶಃ ಶ್ರೋತ್ರಾತ್ ತಥಾ ಲೋಕಾಂ ಅಕಲ್ಪಯನ್ ||15|| ಯಜ್ಞೇನ ಯಜ್ಞಮಯಜಂತ ದೇವಃ ತಾನಿ ಧರ್ಮಾಣಿ ಪ್ರಥಮಾನ್ಯಾಸನ್ | ತೇ ಹ ನಾಕಂ ಮಹಿಮಾನಃ ಸಚಂತೇ ಯತ್ರ ಪೂರ್ವೇ ಸಾಧ್ಯಾಃ ಸಂತಿ ದೇವಾಃ ಓಂ ||16||